ಯೋಗಿಯ ನಾಡಿನಲ್ಲಿ ದಲಿತ, ಅಲ್ಪಸಂಖ್ಯಾತರ ಬೇಟೆ: ಎನ್ ಡಬ್ಯೂ ಎಫ್

Prasthutha: October 3, 2020

ಹೊಸದಿಲ್ಲಿ: ಉತ್ತರಪ್ರದೇಶದ ದಲಿತ ಬಾಲಕಿಯ ಮೇಲಿನ ದೌರ್ಜನ್ಯ ಅತೀ ಕ್ರೂರ ಮತ್ತು ಖಂಡನೀಯ ಎಂದು ನ್ಯಾಷನಲ್ ವಿಮೆನ್ಸ್ ಫ್ರಂಟ್ ರಾಷ್ಟ್ರಾಧ್ಯಕ್ಷೆ ಶಾಹಿದಾ ಅಸ್ಲಂ ಹೇಳಿದ್ದಾರೆ. ಇಡೀ ಜಗತ್ತು ನೋಡುತ್ತಿರುವಂತೆ ನಮ್ಮ ದೇಶದಲ್ಲಿ ನಡೆಯುವ ಇಂತಹಾ ಘಟನೆಗಳು ಭಯಾನಕವಾಗಿದೆ. ಉತ್ತರಪ್ರದೇಶದ ಹಥ್ರಾಸ್ ನಲ್ಲಿ 19ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಹತ್ಯೆ ನಡೆದು ಪ್ರತಿಭಟನೆಗಳು ತೀವ್ರವಾಗುತ್ತಿದ್ದಂತೆಯೇ ಯುಪಿಯ ಬಲರಾಂಪುರದಲ್ಲಿ ಇನ್ನೊಂದು ಘಟನೆ ನಡೆಯುತ್ತದೆ.

ಈ ಭಯಾನಕ ಘಟನೆಗಳು ಮತ್ತು ರಾಜ್ಯ ಸರಕಾರ ಅವುಗಳನ್ನು ನಿಭಾಯಿಸಿದ ರೀತಿ, ಅಲ್ಪವೂ ಪಶ್ಚಾತ್ತಾಪವಿಲ್ಲದ ಮನೋಭಾವವನ್ನು ತೋರಿಸುತ್ತದೆ. ಅಪರಾಧಿಗಳ ವಿರುದ್ಧ ತ್ವರಿತ ಮತ್ತು ಕಠಿಣ ಕ್ರಮಗಳ ಕೊರತೆಯು ದೇಶಾದ್ಯಂತ ಹೆಚ್ಚಿನ ಅಪರಾಧಗಳಿಗೆ ಕಾರಣವಾಗುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರ ಯುಪಿಯಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರ ಭೇಟೆ ಸಾಮಾನ್ಯವಾಗಿಬಿಟ್ಟಿದೆ.

ಸರ್ಕಾರದ ಸಂಪೂರ್ಣ ಬೆಂಬಲದೊಂದಿಗೆ ರಾಜ್ಯದಲ್ಲಿ ಅತ್ಯಾಚಾರಿಗಳು ಮತ್ತು ಕೊಲೆಗಾರರು ಯಾವುದೇ ಭಯವಿಲ್ಲದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ಲದೆ ಹಥ್ರಾಸ್ ಘಟನೆಯಲ್ಲಿ ವಿಧಿ ವಿಧಾನಗಳ ಪ್ರಕಾರ ಮೃತದೇಹ ದ ಅಂತ್ಯಕ್ರಿಯೆ ಮಾಡದೆ ಕುಟುಂಬದ ಅನುಮತಿಯಿಲ್ಲದೆ ದಹನ ಮಾಡಿರುವುದು ಮತ್ತೊಂದು ದುಷ್ಕೃತ್ಯವಾಗಿದೆ. ಅಂತ್ಯಕ್ರಿಯೆಯ ವಿಷಯದಲ್ಲಿ ಸಂತ್ರಸ್ತೆಯ ಕುಟುಂಬಕ್ಕೂ ಕೂಡಾ ನ್ಯಾಯವನ್ನು ನಿರಾಕರಿಸಲಾಯಿತು.

ಆದಿತ್ಯನಾಥ್ ಮುಖ್ಯಮಂತ್ರಿಯಾದ ನಂತರ ಅನ್ಯಾಯ ಮತ್ತು ಅಪರಾಧ ಚಟುವಟಿಕೆಗಳು ಹೆಚ್ಚಾಗಿವೆ ಎಂದು ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ವರದಿ ಮಾಡಿದೆ. ರಾಷ್ಟ್ರಪತಿಗಳು ತಕ್ಷಣ ಮಧ್ಯಪ್ರವೇಶಿಸಿ ಆದಿತ್ಯನಾಥ್ ಸರಕಾರವನ್ನು ವಿಸರ್ಜಿಸಬೇಕು. ಆದಷ್ಟು ಬೇಗ ವಿಚಾರಣೆ ನಡೆಸಿ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಎಫ್ ಐ ಆರ್ ದಾಖಲಿಸಲು ವಿಳಂಬ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಹಿದಾ ಅಸ್ಲಂ ಒತ್ತಾಯಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!