ಯುಪಿ ಪೊಲೀಸರಲ್ಲಿ ವಿಶ್ವಾಸವಿಲ್ಲ | ಸಿಬಿಐ ತನಿಖೆಗೆ ಹತ್ರಾಸ್ ಸಂತ್ರಸ್ತೆಯ ತಂದೆ ಆಗ್ರಹ

Prasthutha News

ಲಕ್ನೋ : ಹತ್ರಾಸ್ ನಲ್ಲಿ ದಲಿತ ಬಾಲಕಿಯನ್ನು ಮೇಲ್ಜಾತಿಯ ಯುವಕರ ಗುಂಪೊಂದು ಹತ್ಯೆಗೈದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಬಾಲಕಿಯ ಕುಟುಂಬ ಆಗ್ರಹಿಸಿದೆ.

ಯುಪಿ ಪೊಲೀಸರ ಮೇಲೆ ತನಗೆ ವಿಶ್ವಾಸ ಇಲ್ಲ ಎಂದು ಬಾಲಕಿಯ ತಂದೆ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ, ನ್ಯಾಯವನ್ನು ಖಚಿತಪಡಿಸಲು ಪೊಲೀಸ್ ತನಿಖೆ ನಡೆಸಲಾಗುವುದೆಂದು ಸರಕಾರ ಹೇಳುತ್ತಿದೆ. ಆದರೆ ಪೊಲೀಸರ ಈಗಿನ ನಡೆಯ ಬಗ್ಗೆ ಅನುಮಾನವಿದೆ. ಅವರು ನಮ್ಮನ್ನು ಮನೆಯಿಂದ ಹೊರ ಬರಲು ಬಿಡುತ್ತಿಲ್ಲ. ಯಾರೊಂದಿಗೂ ಮಾತನಾಡಲು ಸಾಧ್ಯವಾಗುತ್ತಿಲ್ಲ. ಮನೆ ಮತ್ತು ಸುತ್ತಮುತ್ತ ಪೊಲೀಸರೇ ತುಂಬಿಕೊಂಡಿದ್ದಾರೆ ಎಂದು ಬಾಲಕಿಯ ತಂದೆ ಹೇಳಿದ್ದಾರೆ.

ಈತನ್ಮಧ್ಯೆ, ಬಾಲಕಿ ಅತ್ಯಾಚಾರಕ್ಕೆ ಬಲಿಯಾಗಿಲ್ಲ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥರ ಹೇಳಿಕೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿವೆ. ವಿಧಿವಿಜ್ಞಾನದ ಸಾಕ್ಷ್ಯಾಧಾರಗಳ ಮೇಲೆ ಯುಪಿ ಪೊಲೀಸ್ ಎಡಿಜಿಪಿ ಪ್ರಶಾಂತ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ. ಆದರೆ ಇದು ಸಾಕ್ಷ್ಯಗಳನ್ನು ನಾಶಪಡಿಸುವ ಪೊಲೀಸ್ ಪ್ರಯತ್ನದ ಭಾಗವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.


Prasthutha News