ಯುಪಿಯಲ್ಲಿ ಮತ್ತೆ ಕ್ರೌರ್ಯ : ಹನ್ನೊಂದು ವರ್ಷದ ಬಾಲಕಿಯ ಕೊಲೆ

Prasthutha|

ಹಥ್ರಾಸ್: ಉತ್ತರಪ್ರದೇಶದ ಹತ್ರಾಸ್ ನಲ್ಲಿ ಸಾಮೂಹಿಕ ಅತ್ಯಾಚಾರದ ಪ್ರತಿಭಟನೆಯ ಕಾವು ಇನ್ನೂ ಇಳಿದಿಲ್ಲ. ಅದರ ನಡುವೆ ಯುಪಿಯ ಬಲರಾಂಪುರ್ ನಲ್ಲಿ ಸಾಮೂಹಿಕ ಅತ್ಯಾಚಾರ ನಡೆಯಿತು. ಕಾಲುಗಳು ಮತ್ತು ಸೊಂಟದ ಮೂಳೆಗಳು ಮುರಿದ ಸ್ಥಿತಿಯಲ್ಲಿ ಪತ್ತೆಯಾದ ಬಾಲಕಿಯ ದೇಹಕ್ಕೆ ಆರೋಪಿಗಳು ವಿಷವನ್ನು ಚುಚ್ಚಿದ್ದರು. ಈ ಎರಡೂ ಪ್ರಕರಣಗಳಲ್ಲಿ ಹೆಚ್ಚುತ್ತಿರುವ ಪ್ರತಿಭಟನೆಗಳ ನಡುವೆ ಉತ್ತರಪ್ರದೇಶದಲ್ಲಿ ಮತ್ತೆ ದಲಿತ ಬಾಲಕಿಯೊಬ್ಬಳು ಹಿಂಸಾಚಾರಕ್ಕೆ ಬಲಿಯಾಗಿದ್ದಾಳೆ. 11 ವರ್ಷದ ಬಾಲಕಿಯ ದೇಹವನ್ನು ಇಟ್ಟಿಗೆಗಳಿಂದ ತಲೆಗೆ ಹೊಡೆದಿರುವುದು ಕಂಡುಬಂದಿದೆ.

ಬಾಲಕಿಯ ಶವ ಉತ್ತರಪ್ರದೇಶದ ಭಡೋಣಿಯಲ್ಲಿ ಗುರುವಾರ ಸಂಜೆ ಪತ್ತಯಾಗಿದೆ. ಗುರುವಾರ ಮಧ್ಯಾಹ್ನ 12.30ರ ಸುಮಾರಿಗೆ ಮೈದಾನಕ್ಕೆ ಹೋದ ಬಾಲಕಿ ಹಿಂತಿರುಗಲು ತಡವಾದಾಗ ಕುಟುಂಬವು ಅವಳನ್ನು ಹುಡುಕುತ್ತಿತ್ತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಾಲಕಿಯ ಶವ ಪತ್ತೆಯಾಗಿರುವುದಾಗಿ ಬಾಲಕಿಯ ಕುಟುಂಬ ಮಾಹಿತಿ ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -