ಯಡ್ಡಿ ಜೊತೆ ಭಿನ್ನಮತ ಮುಂದುವರಿಸಿದ ಯತ್ನಾಳ್

Prasthutha|

ವಿಜಯಪುರ: ಯಡ್ಡಿಯೂರಪ್ಪ ವಿರುದ್ಧ ತನ್ನ ಬೆಂಬಲಿಗ ಮಾಡಿದ ಪೋಸ್ಟ್ ಒಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಶಾಸಕ ಬಸನಗೌಡ ಪಾಟೀಳ್ ಯತ್ನಾಳ್ ರವರು ಮುಖ್ಯಮಂತ್ರಿಯೊಂದಿಗಿನ ಭಿನ್ನಮತವನ್ನು ಮತ್ತೊಮ್ಮೆ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

ಯತ್ನಾಳ್ ಬೆಂಬಲಿಗ ರಾಘವ ಅಣ್ಣಿಗೇರಿ ಎಂಬವರು ಫೇಸ್ಬುಕ್ ನಲ್ಲಿ ‘ಅಪ್ಪನ ಹೆಸರಿನಿಂದ ರಾಜ್ಯಭಾರ ಮಾಡುವವರೇ, ಉತ್ತರ ಕರ್ನಾಟಕದವರ ಬಗ್ಗೆ ಹಗುರವಾಗಿ ಮಾತನಾಡಿದರೆ ಜನರು ಕ್ಷಮಿಸುವುದಿಲ್ಲ. ಎಚ್ಚರ’ ಎಂದು ಬರೆದುಕೊಂಡಿದ್ದರು. ಈ ಪೋಸ್ಟನ್ನು ಯತ್ನಾಳ್ ಶೇರ್ ಮಾಡಿಕೊಂಡಿದ್ದಾರೆ.

- Advertisement -

‘ವಿಜಯೇಂದ್ರ ಒಬ್ಬನೇ ಉಪಚುನಾವಣೆ ಗೆಲ್ಲುವುದಾದರೆ, ನರೇಂದ್ರ ಮೋದಿ, ಅಮಿತ್ ಶಾ, ನಳಿನ್ ಕುಮಾರ್ ಕಟೀಲ್ ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಾತ್ರವೇನು? ಮಾನ್ಯ ಮುಖ್ಯಮಂತ್ರಿಗಳೇ ಉತ್ತರಿಸುವಿರಾ? ಹಗಲಿರುಳು ಪಕ್ಷಕ್ಕಾಗಿ ದುಡಿಯುವವರ ಪರಿಸ್ಥಿತಿಯೇನು? ಪುತ್ರ ವ್ಯಾಮೋಹದ ಹೇಳಿಕೆ ಕೊಡುವುದನ್ನು  ಬಿಟ್ಟು ತಕ್ಷಣ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೆರವಾಗಿ” ಎಂದು ಬೆಂಬಲಿಗರು ಹಾಕಿದ ಪೋಸ್ಟನ್ನು ಟ್ಯಾಗ್ ಮಾಡಿಕೊಂಡಿದ್ದಾರೆ.

- Advertisement -