ಮ್ಯಾನ್ಮಾರ್‌ನ ರೊಹಿಂಗ್ಯಾ ಗ್ರಾಮವನ್ನು ನಾಶಗೊಳಿಸಲಾಗಿದೆ: ವರದಿ

0
57

ಯಾಂಗಾನ್: ಮ್ಯಾನ್ಮಾರ್‌ನ ರಾಖೈನ್ ರಾಜ್ಯದ ಮುಸ್ಲಿಮರ ರೊಹಿಂಗ್ಯಾ ಗ್ರಾಮವನ್ನು ನೆಲಸಮ ಮಾಡಲಾಗಿದೆ ಎಂದು ಇತ್ತೀಚೆಗೆ ಬಿಬಿಸಿ ವರದಿಗಳು ಬಹಿರಂಗಪಡಿಸಿದೆ.

2017ರಲ್ಲಿ 7,00,000ಕ್ಕೂ ಹೆಚ್ಚು ರೊಹಿಂಗ್ಯಾಗಳು ಮಿಲಿಟರಿ ಕಾರ್ಯಾಚರಣೆಯ ಸಂದರ್ಭದಲ್ಲಿ ಮ್ಯಾನ್ಮಾರ್‌ನಿಂದ ತಪ್ಪಿಸಿಕೊಂಡು ಬೇರೆ ಕಡೆಗೆ ವಲಸೆ ಹೋಗಿದ್ದಾರೆ. ವಿಶ್ವಸಂಸ್ಥೆ ಇದನ್ನು ‘‘ಜನಾಂಗೀಯ ಶುದ್ಧೀಕರಣ’’ ಎಂದು ಕರೆದಿದೆ.

ಬಹುಸಂಖ್ಯಾತ ಬೌದ್ಧ ರಾಷ್ಟ್ರವಾದ ಮ್ಯಾನ್ಮಾರ್ ತನ್ನ ಸೈನ್ಯವು ನಡೆಸಿದ ಜನಾಂಗೀಯ ಶುದ್ಧೀಕರಣ ಮತ್ತು ನರಮೇಧವನ್ನು ನಿರಾಕರಿಸುತ್ತಲೇ ಬಂದಿದೆ. ಕೆಲವು ನಿರಾಶ್ರಿತರನ್ನು ಮರಳಿ ಕರೆದುಕೊಂಡು ಹೋಗಲು ಸಿದ್ಧ ಎಂದು ಮ್ಯಾನ್ಮಾರ್ ಹೇಳಿದೆ. ನಿರಾಶ್ರಿತರ ಶಿಬಿರವನ್ನು ಪ್ರದರ್ಶಿಸಲು ಮ್ಯಾನ್ಮಾರ್ ಬಿಬಿಸಿ ಸೇರಿದಂತೆ ಇತರ ಪತ್ರಕರ್ತರನ್ನು ಆಹ್ವಾನಿಸಿತ್ತು. ಸರಕಾರವು ಬಿಬಿಸಿ ತಂಡವನ್ನು ಹ್ಲಾ ಪೋ ಕೌಂಗ್ ಶಿಬಿರಕ್ಕೆ ಕರೆದೊಯ್ದಿತ್ತು.

‘‘ಸುಮಾರು ಒಂದು ವರ್ಷದ ಹಿಂದೆ ಪೂರ್ಣಗೊಂಡ ಈ ಶಿಬಿರವು ಕಳಪೆ ಸ್ಥಿತಿಯಲ್ಲಿದೆ. ಈ ಶಿಬಿರವನ್ನು 2017ರ ಹಿಂಸಾಚಾರದ ನಂತರ ನೆಲಸಮಗೊಳಿಸಿದ ಎರಡು ರೊಹಿಂಗ್ಯಾ ಗ್ರಾಮಗಳಾದ ಹಾವ್ ರಿ ತು ಲಾರ್ ಮತ್ತು ಥಾರ್ ಝೇ ಕೋನ್ ಸ್ಥಳದಲ್ಲಿ ನಿರ್ಮಿಸಲಾಗಿದೆ’’ ಎಂದು ಬಿಬಿಸಿ ವರದಿ ಮಾಡಿದೆ.

LEAVE A REPLY

Please enter your comment!
Please enter your name here