ಮೋಹನ್ ಭಾಗವತ್ ಜೊತೆ ಅಸದುದ್ದೀನ್ ಉವೈಸಿ “ಹರಟೆ” ! ವಾಸ್ತವವೇನು?

Prasthutha|

ನವದೆಹಲಿ: ಸೈದ್ಧಾಂತಿಕವಾಗಿ ತದ್ವಿರುದ್ಧವಾದ ಅಭಿಪ್ರಾಯಗಳನ್ನು ಹೊಂದಿರುವ ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತಿಹಾದುಲ್ ಮುಸ್ಲಿಮೀನ್ ಪಕ್ಷದ ಅಧ್ಯಕ್ಷ ಅಸದುದ್ದೀನ್ ಉವೈಸಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ- RSSನ ಸರ ಸಂಘ ಚಾಲಕ ಮೋಹನ್ ಭಾಗವತ್ ಒಂದೇ ಸೋಫಾದಲ್ಲಿ ಕುಳಿತು ನಗುಮೊಗದಿಂದ ಹರಟೆ ಹೊಡೆಯುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಕಾರ್ಯಕರ್ತರನ್ನು ಪರಸ್ಪರ ಕಚ್ಚಾಡಿಸಿ ನಾಯಕರು ಒಟ್ಟಿಗೆ ಕುಳಿತು ಹರಟೆ ಹೊಡೆಯುತ್ತಿದ್ದಾರೆ ಎಂಬ ಕ್ಯಾಪ್ಶನ್’ಗಳೊಂದಿಗೆ ಫೋಟೋ ಹರಿದಾಡುತ್ತಿದೆ.
ಆದರೆ ವಾಸ್ತವವಾಗಿ ಇದು [ಮಾರ್ಫ್] ತಿರುಚಿದ ಚಿತ್ರವಾಗಿದೆ.
ನಿಜಾಂಶವೇನು?
ಮೂಲ ಫೋಟೋದಲ್ಲಿ ಮೋಹನ್ ಭಾಗವತ್ ಪಕ್ಕದಲ್ಲಿ ಕುಳಿತಿರುವವರು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್. ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಮೊಮ್ಮಗಳ ಆರತಕ್ಷತೆ ಕಾರ್ಯಕ್ರಮದಲ್ಲಿ ತೆಗೆದ ಫೋಟೋ ಇದಾಗಿದೆ. ಮೋಹನ್ ಭಾಗವತ್ ಹಾಗೂ ಮುಲಾಯಂ ಸಿಂಗ್ ಯಾದವ್ ಮಾತುಕತೆಯಲ್ಲಿ ತೊಡಗಿರುವ ವೇಳೆ ಸಂಸದೀಯ ವ್ಯವಹಾರಗಳ ಸಚಿವ ಅರ್ಜುನ್ ರಾಮ್ ಮೇಘಾವಲ್ ಅವರು ಮೋಹನ್ ಭಾಗವತ್ ಜೊತೆ ಹಸ್ತಲಾಘವ ಮಾಡುವುದು ಚಿತ್ರದಲ್ಲಿದೆ.

- Advertisement -

2021 ಡಿಸೆಂಬರ್ 22ರಂದು ಟೈಮ್ಸ್ ಆಫ್ ಇಂಡಿಯಾ ನ್ಯೂಸ್ ವೈಬ್’ಸೈಟ್’ನಲ್ಲಿ ಈ ಫೋಟೋ ಪ್ರಕಟವಾಗಿದೆ.
ಇದೇ ಫೋಟೋವನ್ನು ತಿರುಚಿ ಮುಲಾಯಂ ಸಿಂಗ್ ಯಾದವ್ ಅವರ ಜಾಗದಲ್ಲಿ ಅಸದುದ್ದೀನ್ ಉವೈಸಿ ನಗುತ್ತಾ ಕುಳಿತಿರುವ ಫೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾಗುತ್ತಿದೆ.

Join Whatsapp