ಮುಝಪ್ಫರ್ ನಗರ ಪ್ರಕರಣಗಳ ಖುಲಾಸೆಯ ಬಗ್ಗೆ ನ್ಯಾಯವಾದಿಗಳ ಸಭೆಯಿಂದ ಪರಿಶೀಲನೆ

0
34

ಸ್ಥಳೀಯ ವಕೀಲರ ತಂಡವು  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಯೋಜಿಸಿದ ಪ್ರತಿನಿಧಿಗಳೊಂದಿಗೆ ಮುಝಪ್ಫರ್ ನಗರದಲ್ಲಿ ಸಭೆ ಸೇರಿತು. ಮುಝಪ್ಫರ್ ನಗರ ಗಲಭೆಗೆ ಸಂಬಂಧಿಸಿದ ಬಹುತೇಕ ಪ್ರಕರಣಗಳು ಖುಲಾಸೆಯಾಗಲು ಪೂರಕವಾದ ಸನ್ನಿವೇಶಗಳ ಕುರಿತು ಸಭೆಯು ಅವಲೋಕನ ನಡೆಸಿತು. ವಿಚಾರಣಾಧೀನ ಮತ್ತು ಖುಲಾಸೆಗೊಂಡಿರುವ ಪ್ರಕರಣಗಳ ಬಗ್ಗೆ ನಿರಂತರ ಗಮನ ಹರಿಸಲು ಸಭೆಯು ನಿರ್ಣಯ ತೆಗೆದುಕೊಂಡಿತು. ಇದರ ಮೇಲ್ನೋಟಕ್ಕಾಗಿ ಏಳು ಮಂದಿಯ ಸಮಿತಿಯನ್ನು ರಚಿಸಲಾಯಿತು.

ಭೇಟಿ ನೀಡಿದ ಪ್ರತಿನಿಧಿಗಳ ನಿಯೋಗದಲ್ಲಿ ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾದ ಇ. ಎಂ. ಅಬ್ದುರ್ರಹ್ಮಾನ್ ಮತ್ತು ಅಡ್ವೊಕೇಟ್ ಮುಹಮ್ಮದ್ ಯೂಸುಫ್ ಸೇರಿದಂತೆ ಎನ್‌ಸಿಎಚ್‌ಆರ್‌ಓ ಕೋಶಾಧಿಕಾರಿ ಅಡ್ವೊಕೇಟ್ ಕೆ.ಪಿ. ಮುಹಮ್ಮದ್ ಶರೀಫ್, ಎನ್‌ಸಿಎಚ್‌ಆರ್‌ಒ ಮಹಾರಾಷ್ಟ್ರ ಚಾಪ್ಟರ್‌ನ ಪ್ರಧಾನ ಕಾರ್ಯದರ್ಶಿ ಅಡ್ವೊಕೇಟ್ ಸೈಫನ್ ಶೇಖ್ ದೆಹಲಿ ಚಾಪ್ಟರ್‌ನ ಪ್ರಧಾನ ಕಾರ್ಯದರ್ಶಿ ಅಡ್ವೊಕೇಟ್ ಅನ್ಸಾರ್ ಇಂಧೋರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here