ಮುಂಬೈ| ಸಿಲಿಂಡರ್ ಸ್ಫೋಟದಲ್ಲಿ ಕನಿಷ್ಟ 20 ಮಂದಿಗೆ ಗಾಯ

Prasthutha|

ಮುಂಬೈ ಮಹಾನಗರದ ಲಾಲ್ ಬಾಗ್ ಪ್ರದೇಶದ, ಗಣೇಶ್ ಗಲ್ಲಿಯಲ್ಲಿರುವ ಕಟ್ಟಡವೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿ ಪರಿಣಾಮ ಕನಿಷ್ಟ 20 ಮಂದಿ ಗಾಯಗೊಂಡಿರುವುದಾಗಿ ಮಾಧ್ಯಮವೊಂದು ವರದಿಮಾಡಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸೇವೆಯ ಎರಡು ಬೃಹತ್ ಟ್ಯಾಂಕರ್ ಗಳನ್ನು ರವಾನಿಸಲಾಗಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ ಮೂಲಗಳಿಂದ ಮಾಹಿತಿ ದೊರಕಿದೆ.

- Advertisement -

ಸ್ಫೋಟದ ತೀವ್ರತೆಗೆ ಗಾಯಗೊಂಡ ಜನರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

- Advertisement -