ಮುಂದಿನ ತಿಂಗಳಿನಿಂದ 33 ನಗರಗಳಿಗೆ ‘ಸೌದಿಯಾ’ ವಿಮಾನಗಳ ಹಾರಾಟ

Prasthutha|

ಜೆದ್ದಾ : ಸೌದಿ ಅರೇಬಿಯನ್ ವಿಮಾನಯಾನ ಸಂಸ್ಥೆ ‘ಸೌದಿಯಾ’ ನವೆಂಬರ್ ನಲ್ಲಿ 33 ರಾಷ್ಟ್ರಗಳಿಗೆ ತನ್ನ ಅಂತಾರಾಷ್ಟ್ರೀಯ ಪ್ರಯಾಣ ಆರಂಭಿಸಲಿದೆ. ಈ ಕುರಿತು ಶುಕ್ರವಾರ ‘ಸೌದಿಯಾ’ ತನ್ನ ಅಧಿಕೃತ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದೆ.

ಪಶ್ಚಿಮದಲ್ಲಿ ಏಳು ನಗರಗಳಿಗೆ ವಿಮಾನ ಯಾನ ಆರಂಭಿಸಲಾಗುವುದು. ಅವುಗಳಲ್ಲಿ ಆಮ್ ಸ್ಟರ್ಡಮ್, ಫ್ರಾಂಕ್ ಫರ್ಟ್, ಲಂಡನ್, ಮ್ಯಾಡ್ರಿಡ್, ಪ್ಯಾರಿಸ್ ಮತ್ತು ಇಸ್ತಾನ್ ಬುಲ್ ಹಾಗೂ ಅಮೆರಿಕದ ವಾಶಿಂಗ್ಟನ್ ನಗರಗಳು ಸೇರಿವೆ.

- Advertisement -

ಆಫ್ರಿಕಾದ ಆರು, ಏಷ್ಯಾದ 13 ನಗರಗಳಿಗೆ ವಿಮಾನ ಹಾರಾಟ ಆರಂಭವಾಗಲಿದೆ. ಏಷ್ಯಾದ ದೆಹಲಿ, ಡಾಕಾ, ಗುವಾಂಗ್ ಝೋ, ಇಸ್ಲಾಮಾಬಾದ್, ಜಕಾರ್ತ, ಕರಾಚಿ, ಕೊಚ್ಚಿ, ಕೌಲಾಲಂಪುರ, ಲಾಹೋರ್, ಮನಿಲಾ, ಮುಲ್ತಾನ್, ಮುಂಬೈ ಮತ್ತು ಪೇಶಾವರಕ್ಕೆ ವಿಮಾನ ಹಾರಾಟ ಮರು ಆರಂಭಗೊಳ್ಳಲಿದೆ.

ಕೊರೋನ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ನೀಡಲಾಗಿರುವ ಎಲ್ಲಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ‘ಸೌದಿಯಾ’ ಪ್ರಯಾಣಿಕರಿಗೆ ಕರೆ ನೀಡಿದೆ. ಸೌದಿಯ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಈ ಹಂತದಲ್ಲಿ ಕಾರ್ಯಾಚರಣೆ ಆರಂಭಿಸಲಿವೆ. ಕೊರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿರ್ಬಂಧವಿತ್ತು.

ನ.17ರಿಂದ ಕಾಲೇಜು ಆರಂಭಿಸುವುದಾಗಿ ಸರಕಾರ ಘೋಷಿಸಿದೆ. ಈ ಬಗ್ಗೆ ಪರ-ವಿರೋಧ ಹೇಳಿಕೆಗಳು ವ್ಯಕ್ತವಾಗುತ್ತಿವೆ. ಕೋವಿಡ್ – 19 ಪ್ರಕರಣಗಳು ಇನ್ನೂ ಸಾಕಷ್ಟು ದೊಡ್ಡ ಪ್ರಮಾಣದಲ್ಲಿರುವಾಗ ಕಾಲೇಜು ಆರಂಭಿಸಲು ಸರಕಾರ ನಿರ್ಧಾರ ಕೈಗೊಂಡಿರುವುದು ಸರಿಯೇ? ತಪ್ಪೇ? ಎಂಬ ಬಗ್ಗೆ ‘ಪ್ರಸ್ತುತ’ ಜನಾಭಿಮತ ಸಂಗ್ರಹಿಸುತ್ತಿದೆ. ಈ ಬಗ್ಗೆ ನಿಮ್ಮ ನಿಲುವನ್ನು ‘ಪ್ರಸ್ತುತ’ ಫೇಸ್ ಬುಕ್ ಪೇಜ್ ನಲ್ಲಿ ವ್ಯಕ್ತಪಡಿಸಿ.

https://www.facebook.com/2171161852895947/posts/3694124020599715/

- Advertisement -