ಮಾಸ್ಕ್ ಧರಿಸದವರ, ಸಾಮಾಜಿಕ ಅಂತರ ಕಾಪಾಡದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಿ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ

Prasthutha|

►►ಪ್ರತಿಭಟನೆಗಳಲ್ಲಿ ಮಾಸ್ಕ್ ಧರಿಸದವರ ವಿರುದ್ಧ ಹೈಕೋರ್ಟ್ ಕಿಡಿ

►►ಕೋರ್ಟ್ ಮುಂದೆ ಪ್ರತಿಭಟನಾ ಸಭೆಗಳ ಚಿತ್ರಗಳನ್ನು ಹಾಜರುಪಡಿಸಿದ ದೂರುದಾರ

- Advertisement -

ಬೆಂಗಳೂರು: ಮಾಸ್ಕ್ ಧರಿಸದವರು ಮತ್ತು ಸಾಮಾಜಿಕ ಅಂತರವನ್ನು ಪಾಲಿಸದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವಂತೆ ರಾಜ್ಯ ಹೈಕೋರ್ಟ್ ಕರ್ನಾಟಕ ಸರಕಾರಕ್ಕೆ ಸೂಚಿಸಿದೆ.

ಹಲಸೊರು ಗೇಟ್ ಬಳಿ 35 ಪ್ರತಿಭಟನೆಗಳು ನಡೆದಿದ್ದು, ಮಾಸ್ಕ್ ಧರಿಸುವ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಯಮವು ಪಾಲನೆಯಾಗಿಲ್ಲ. ಆರೋಗ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸದ ಈ ರೀತಿಯ ಪ್ರತಿಭಟನೆಗಳನ್ನು ಸಂಘಟಿಸುವುದಕ್ಕೆ ನಿರ್ಬಂಧ ಹೇರಬೇಕೆಂದು ಸಾಯಿದತ್ತ ಸಲ್ಲಿಸಿದ ಸಾರ್ವಜನಿಕ ಅರ್ಜಿಯ ವಿಚಾರಣೆ ನಡೆಸಿದ ಮುಖ ನ್ಯಾಯಮೂರ್ತಿ ಎ.ಎಸ್.ಓಕಾರವರನ್ನೊಳಗೊಂಡ್ ವಿಭಾಗೀಯ ಪೀಠ ಇಂತಹ ಸೂಚನೆಯೊಂದನ್ನು ಸರಕಾರಕ್ಕೆ ನೀಡಿದೆ.

“ಪ್ರತಿಭಟನೆಗಳ ಚಿತ್ರಗಳು ಮಾಸ್ಕ್ ಧರಿಸುವ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಬೇಕಾದ ನಿಯಮಗಳು ಪಾಲನೆಯಾಗದಿರುವುದನ್ನು ಸ್ಪಷ್ಟಪಡಿಸುತ್ತದೆ. ಕೋವಿಡ್ ಹರಡಲು ಇದು ಕಾರಣವಾಗುತ್ತದೆ. ರಾಜ್ಯ ಸರಕಾರ ಮತ್ತು ಸಂಬಂಧಿಸಿದ ಪ್ರಾಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಂಡು ಇಂತಹ ಉಲ್ಲಂಘನೆಗಳನ್ನು ತಡೆಯಬೇಕು” ಎಂದು ಅವರು ಪೀಠ ಹೇಳಿದೆ.

- Advertisement -