ಮಾಸಿಕ 20 ಯುಪಿಐ ವ್ಯವಹಾರಕ್ಕೆ ಖಾಸಗಿ ಬ್ಯಾಂಕ್ ಗಳಿಂದ ಶುಲ್ಕ | ಭಾಷಣಕ್ಕೆ ಸೀಮಿತವಾದ ‘ಕ್ಯಾಶ್ ಲೆಸ್ ಎಕಾನಮಿ’

Prasthutha|

ನವದೆಹಲಿ : ಕ್ಯಾಶ್ ಲೆಸ್ ಎಕಾನಮಿ ಮಾಡಬೇಕೆಂದು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಗಂಟೆಗಟ್ಟಲೆ ಭಾಷಣ ಬಿಗಿದಿದ್ದರು. ಇನ್ನೊಂದೆಡೆ, ಕೊರೋನ ಸಂಕಷ್ಟದ ಈ ಕಾಲದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಪದೇ ಪದೇ ಹೇಳಲಾಗುತ್ತಿದೆ. ಆದರೆ, ಈ ನಡುವೆ, ಖಾಸಗಿ ಬ್ಯಾಂಕ್ ಗಳು ಮಾತ್ರ ನಿಮ್ಮ ಆನ್ ಲೈನ್ ವ್ಯವಹಾರಕ್ಕೆ ಶುಲ್ಕ ವಿಧಿಸುವ ಕಾರ್ಯ ಸದ್ದಿಲ್ಲದೆ ಮಾಡುತ್ತಿದೆ ಎಂದು ವರದಿಗಳು ತಿಳಿಸುತ್ತಿವೆ.

ಯುಪಿಐ (ಯುನೈಟೆಡ್ ಪೇಮೆಂಟ್ ಇಂಟರ್ ಫೇಸ್) ಮೂಲಕ ಪರ್ಸನ್ ಟು ಪರ್ಸನ್ ಆನ್ ಲೈನ್ ವ್ಯವಹಾರ ನಡೆಸುವ ವ್ಯಕ್ತಿಗಳು ತಿಂಗಳಿಗೆ 20ಕ್ಕಿಂತ ಹೆಚ್ಚು ವ್ಯವಹಾರ ನಡೆಸಿದರೆ, ಖಾಸಗಿ ಬ್ಯಾಂಕ್ ಗಳು ಶುಲ್ಕ ವಿಧಿಸುತ್ತವೆ ಎಂದು ‘ಬ್ಯುಸಿನೆಸ್ ಸ್ಟಾಂಡರ್ಡ್’ ವರದಿ ಮಾಡಿದ್ದು, ಸುಮಾರು 2.5 ರೂ.ಯಿಂದ 5 ರೂ. ವರೆಗೆ ಶುಲ್ಕ ವಿಧಿಸಲಾಗುತ್ತಿದೆ ಎಂದು ಈ ವರದಿ ತಿಳಿಸಿದೆ.

- Advertisement -

ಲಾಕ್ ಡೌನ್ ಅವಧಿಯಲ್ಲಿ ಯುಪಿಐ ಬಳಕೆ ಪ್ರತಿ ತಿಂಗಳು ಶೇ.8ರಷ್ಟು ಏರಿಕೆಯಾಗುತ್ತಲೇ ಹೋಗುತ್ತಿದೆ. 1000 ರೂ. ಒಳಗಿನ ವ್ಯವಹಾರಕ್ಕೆ 2.5 ರೂ. ಮತ್ತು 1000 ರೂ. ಮೇಲಿನ ವ್ಯವಹಾರಕ್ಕೆ 5 ರೂ. ಶುಲ್ಕ ವಿಧಿಸಲಾಗುತ್ತಿದೆ. ಜಿಎಸ್ ಟಿ ಪ್ರತ್ಯೇಕವಾಗಿ ಹಾಕಲಾಗುತ್ತಿದೆ.

ಪಾವತಿ, ವರ್ಗಾವಣೆಗೆ ಶುಲ್ಕ ವಿಧಿಸುವ ಮೂಲಕ ಕಾನೂನನ್ನು ತಮ್ಮಿಷ್ಟಕ್ಕೆ ತಕ್ಕಂತೆ ಬ್ಯಾಂಕ್ ಗಳು ವ್ಯಾಖ್ಯಾನಿಸುತ್ತಿವೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಬ್ಯಾಂಕಿಂಗ್ ವಲಯದಲ್ಲಿ ಇತರ ಬ್ಯಾಂಕ್ ಗಳನ್ನು ದಾರಿ ತಪ್ಪಿಸಿದಂತಾಗುತ್ತದೆ ಎಂಬ ಆರೋಪಗಳು ಕೇಳಿಬಂದಿವೆ. ಆದರೆ ಸರಕಾರದಿಂದ ಯುಪಿಐ ಉಚಿತವಾಗಿ ಒದಗಿಸಲಾಗುತ್ತಿದೆ.

- Advertisement -