ಮಹಿಳೆಗೆ ಲೈಂಗಿಕ ಹಿಂಸೆ: ಬಿಜೆಪಿ ನಾಯಕನ ಬಂಧನ
Prasthutha: October 12, 2020

ಬದೌನ್: ಮಹಿಳೆಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಉತ್ತರ ಪ್ರದೇಶದ ಬಿಜೆಪಿಯ ಸ್ಥಳೀಯ ನಾಯಕನೊಬ್ಬನನ್ನು ಬಂಧಿಸಲಾಗಿದೆ.
ಮಹಿಳೆಯ ದೂರಿನ ಮೇರೆಗೆ ಬಿಜೆಪಿಯ ಬೂತ್ ಅಧ್ಯಕ್ಷ ವಿಪಿನ್ ಮಾಲಿಯನ್ನು ಭಾರತೀಯ ದಂಡ ಸಂಹಿತೆಯ 354ನೆ ವಿಧಿಯಡಿ ಪ್ರಕರಣ ದಾಖಲಿಸಲಾಗಿದ್ದು, ರವಿವಾರ ರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ದೂರಿನ ಪ್ರಕಾರ, ಬಿಜೆಪಿ ನಾಯಕನು ಆಕೆಗೆ ಲೈಂಗಿಕ ಹಿಂಸೆ ನೀಡಲು ಪ್ರಯತ್ನಿಸಿದ್ದ. ಈ ಸಂದರ್ಭದಲ್ಲಿ ಮಹಿಳೆ ಜೋರಾಗಿ ಕೂಗಿಕೊಂಡಿದ್ದು, ಆಗ ಅಲ್ಲಿಂದ ಕಾಲ್ಕಿತ್ತಿದ್ದ.
