January 13, 2021

ಮಹಾರಾಷ್ಟ್ರ ಸಚಿವರ ವಿರುದ್ಧ ಮಹಿಳೆಯಿಂದ ಅತ್ಯಾಚಾರ ಆರೋಪ

ಮಹಾರಾಷ್ಟ್ರದ ಸಚಿವ ಧನಂಜಯ ಮುಂಡೆ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದಾರೆ.
ಈ ಘಟನೆ ರಾಜಕೀಯ ವಾಗ್ದಾಳಿಗಳಿಗೆ ಕಾರಣವಾಗಿದ್ದು, ಸಚಿವರ ರಾಜೀನಾಮೆಗೆ ಬಿಜೆಪಿ ಒತ್ತಾಯಿಸಿದೆ.
ಆದಾಗ್ಯೂ, ಮಹಿಳೆಯ ದೂರನ್ನು ಆಧರಿಸಿ ಇದುವರೆಗೆ ಎಫ್ ಐಆರ್ ದಾಖಲಾಗಿಲ್ಲ.
ಅತ್ಯಾಚಾರ ಆರೋಪ ಮಾಡಿರುವ ಯುವತಿ ಮತ್ತು ಆಕೆಯ ಸಹೋದರಿ ತಮ್ಮನ್ನು ಬ್ಲಾಕ್ ಮೇಲ್ ಮಾಡುತ್ತಿದ್ದರು. ಈ ಸಂಬಂಧ ನವೆಂಬರ್ ತಿಂಗಳಲ್ಲೇ ತಾವು ಪೊಲೀಸರಿಗೆ ದೂರು ನೀಡಿರುವುದಾಗಿ ಸಾಮಾಜಿಕ ನ್ಯಾಯ ಖಾತೆ ಸಚಿವ ಧನಂಜಯ್ ಮುಂಡೆ ಫೇಸ್ ಬುಕ್ ಮೂಲಕ ತಿಳಿಸಿದ್ದಾರೆ.
2003 ರಿಂದ ಮಹಿಳೆಯ ಸಹೋದರಿಯೊಂದಿಗೆ ಸಂಬಂಧ ಹೊಂದಿದ್ದು, ಇದರಲ್ಲಿ ತಮಗೆ ಇಬ್ಬರು ಮಕ್ಕಳಿದ್ದಾರೆ. ಈ ಸಂಬಂಧವನ್ನು ನಮ್ಮ ಕುಟುಂಬ ಕೂಡ ಒಪ್ಪಿಕೊಂಡಿದೆ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖಂಡರೂ ಆಗಿರುವ 45 ವರ್ಷದ ಮುಂಡೆ ತಿಳಿಸಿದ್ದಾರೆ.
“ಈ ವಿಷಯವು ನನ್ನ ಕುಟುಂಬ, ಪತ್ನಿ ಮತ್ತು ಸ್ನೇಹಿತರಿಗೆ ತಿಳಿದಿತ್ತು. ಈ ಪರಸ್ಪರ ಒಪ್ಪಿಗೆಯ ಸಂಬಂಧದಲ್ಲಿ, ನಮಗೆ ಒಬ್ಬಪುತ್ರ ಮತ್ತು ಪುತ್ರಿ ಜನಿಸಿದ್ದಾರೆ. ನನ್ನ ಕುಟುಂಬ, ಪತ್ನಿ ಮತ್ತು ನನ್ನ ಮಕ್ಕಳು ಸಹ ಈ ಮಕ್ಕಳನ್ನು ತಮ್ಮ ಕುಟುಂಬವಾಗಿ ಪರಿಗಣಿಸಿ ಅಂಗೀಕರಿಸಿದ್ದಾರೆ ಎಂದು ಅವರು ಬರೆದಿದ್ದಾರೆ.
“ಇಡೀ ಪ್ರಕರಣವನ್ನು ಬ್ಲ್ಯಾಕ್‌ ಮೇಲ್ ಗಾಗಿ ಬಳಸಲಾಗುತಿದೆ. ಈ ಮೂಲಕ ತಮ್ಮ ಮಾನಹಾನಿಗೆ ಪ್ರಯತ್ನಿಸಲಾಗುತ್ತಿದೆ. ಆದ್ದರಿಂದ ದಯವಿಟ್ಟು ಅಂತಹ ಆರೋಪಗಳನ್ನು ನಂಬಬೇಡಿ ಎಂದು ಫೇಸ್ ಬುಕ್ ನಲ್ಲಿ ಸಚಿವರು ಮನವಿ ಮಾಡಿದ್ದಾರೆ.

ಟಾಪ್ ಸುದ್ದಿಗಳು

ವಿಶೇಷ ವರದಿ