ಮಹಾರಾಷ್ಟ್ರದಲ್ಲಿ ಪ್ರತಿದಿನ ಕನಿಷ್ಠ 7 ಮಂದಿ ರೈತರ ಆತ್ಮಹತ್ಯೆ!

0
44

ಮುಂಬೈ: ಸರಕಾರದ ಅಂಕಿಅಂಶಗಳ ಪ್ರಕಾರ, 2019ರ ಜುಲೈನಲ್ಲಿ ಮಹಾರಾಷ್ಟ್ರದಲ್ಲಿ 219 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರತಿದಿನ ಸರಾಸರಿ ಏಳು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ರವರು 2017ರಲ್ಲಿ ಮಹಾರಾಷ್ಟ್ರದಲ್ಲಿ ಸಮಸ್ಯೆಗೊಳಗಾದ ರೈತರಿಗೆ ಕೃಷಿ ಸಾಲಮನ್ನಾ ಘೋಷಿಸಿದಾಗ, ರೈತರ ಆತ್ಮಹತ್ಯೆಯ ಸಂಖ್ಯೆ ಹೆಚ್ಚಾಗಲಿದೆ ಎಂದು ಯಾರು ಕೂಡಾ ಭಾವಿಸಿರಲಿಲ್ಲ.

ಸರಕಾರದ ಕೃಷಿ ಪುನರ್ವಸತಿ ಇಲಾಖೆಯು ಸಂಗ್ರಹಿಸಿದ ದತ್ತಾಂಶದ ಪ್ರಕಾರ, 2019ರ ಮೊದಲ ಆರು ತಿಂಗಳಲ್ಲಿ 1,542 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,487 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಮನ್ ಮ್ಯಾಗೆಸ್ಸೆ ಪ್ರಶಸ್ತಿ ಪುರಸ್ಕೃತ ಪಿ.ಸಾಯಿನಾಥ್‌ರವರು ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿದ್ದು, ‘‘ಪ್ರಸ್ತುತ ಸ್ಥಿತಿಯು ಕೃಷಿ ಬಿಕ್ಕಟ್ಟಿಗಿಂತ ಹೆಚ್ಚಾಗಿದೆ’’ ಎಂದು ಹೇಳಿದ್ದಾರೆ.

‘‘ಜೀವನ ವೆಚ್ಚ ಮತ್ತು ಉತ್ಪಾದನಾ ವೆಚ್ಚವು ನಿರಂತರವಾಗಿ ಏರುತ್ತಿದ್ದರೂ, ರೈತನ ನೈಜ ಆದಾಯವು ಸ್ಥಿರವಾಗಿಯೇ ಉಳಿದಿದೆ’’ ಎಂದು ಕೃಷಿ ಕಾರ್ಯಕರ್ತ ವಿಜಯ್ ಜವಾಂಧಿಯಾ ಹೇಳಿದ್ದಾರೆ.

LEAVE A REPLY

Please enter your comment!
Please enter your name here