January 19, 2021
ಮಮತಾ ‘ಇಸ್ಲಾಮಿಕ್ ಭಯೋತ್ಪಾದಕಿ’ ಎಂದ ಉತ್ತರಪ್ರದೇಶ ಸಚಿವ

ಲಕ್ನೋ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ‘ಇಸ್ಲಾಮಿಕ್ ಭಯೋತ್ಪಾದಕಿ’ಯಾಗಿದ್ದಾಳೆ. ಅವಳು ವಿಧಾನಸಭಾ ಚುನಾವಣೆಯ ನಂತರ ಬಾಂಗ್ಲಾದೇಶದಲ್ಲಿ ಆಶ್ರಯ ಪಡೆಯಬೇಕಾಗುತ್ತದೆ ಎಂದು ಬಿಜೆಪಿ ನಾಯಕ ಆನಂದ್ ಸ್ವರೂಪ್ ಶುಕ್ಲಾ ಹೇಳಿದ್ದಾರೆ. ಸ್ವರೂಪ್ ಶುಕ್ಲಾ ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದಾರೆ.
“ಅವಳು ಇಸ್ಲಾಮಿಕ್ ಭಯೋತ್ಪಾದಕಿ. ಅವಳು ಪಶ್ಚಿಮ ಬಂಗಾಳದ ದೇವಾಲಯಗಳನ್ನು ನಾಶಮಾಡಿ ದೇವತೆಗಳನ್ನು ಅವಮಾನಿಸಿದ್ದಾಳೆ. ಅವಳು ಬಾಂಗ್ಲಾದೇಶದ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾಳೆ”ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಮಮತಾ ಬ್ಯಾನರ್ಜಿ ಭಾರತೀಯತೆಯನ್ನು ನಂಬುವುದಿಲ್ಲ. ಅವಳು ಹಿಂದೂ ದೇವತೆಗಳನ್ನು ಅವಮಾನಿಸಿದ್ದಾಳೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ‘ಭಾರತ್ ಮಾತಾ ಕಿ ಜೈ’ ಮತ್ತು ‘ವಂದೇ ಮಾತರಂ’ ಎಂದು ಘೋಷಣೆ ಕೂಗುವ ಮುಸ್ಲಿಮರನ್ನು ದೇಶದಲ್ಲಿ ಗೌರವಿಸಲಾಗುವುದು ಎಂದು ಅವರು ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.