Home ಟಾಪ್ ಸುದ್ದಿಗಳು ಮನಮೋಹನ್ ಸಿಂಗ್ ನಿಧನಕ್ಕೆ SDPI ತೀವ್ರ ಸಂತಾಪ

ಮನಮೋಹನ್ ಸಿಂಗ್ ನಿಧನಕ್ಕೆ SDPI ತೀವ್ರ ಸಂತಾಪ

ನವದೆಹಲಿ: ಭಾರತದ ಮಾಜಿ ಪ್ರಧಾನಿ, ನವ ಭಾರತದ ಆರ್ಥಿಕತೆಯ ಸುಧಾರಕ, ವಿಶ್ವದ ಶ್ರೇಷ್ಠ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರು ಕೊನೆಯುಸಿರೆಳೆದಿದ್ದಾರೆ.


ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನಕ್ಕೆ SDPI ತೀವ್ರ ಸಂತಾಪ ಸೂಚಿಸಿದೆ. ರಾಷ್ಟ್ರದ ಬೆಳವಣಿಗೆ ಮತ್ತು ಜಾತ್ಯತೀತ ಪ್ರಜಾಪ್ರಭುತ್ವಕ್ಕೆ ಅವರು ನೀಡಿದ ಅಪಾರ ಕೊಡುಗೆಗಾಗಿ ಅವರನ್ನು ಸ್ಮರಿಸಲಾಗುತ್ತದೆ ಎಂದು ಎಸ್ ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಜಿ ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.


1970 ರ ದಶಕದಲ್ಲಿ ಅವರು ಭಾರತ ಸರ್ಕಾರದ ಆರ್ಥಿಕ ಸಲಹಾ ಹುದ್ದೆಗಳ ಸರಣಿಗೆ ಹೆಸರುವಾಸಿಯಾಗಿದ್ದರು. ಮನಮೋಹನ್ ಸಿಂಗ್ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕರಾಗಿ (1976–80) ಹಾಗೂ ಆರ್ಬಿಐ ಗವರ್ನರ್ (1982–85) ಸೇವೆ ಸಲ್ಲಿಸಿದ್ದಾರೆ.

Join Whatsapp
Exit mobile version