ಮದ್ರಾಸ್ ಹೈಕೋರ್ಟ್ ಮಾಜಿ ನ್ಯಾಯಾಧೀಶ ಈಗ ರೈತ!

0
333

ಹೊಸದಿಲ್ಲಿ: ಮದ್ರಾಸ್ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಎ. ಸೆಲ್ವಮ್ ಕುರಿತ ಎರಡು ವೀಡಿಯೋ ದಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಒಳ್ಳೆಯ ಕಾರಣಕ್ಕಾಗಿ ವೈರಲ್ ಆಗಿದೆ. ಟಿ ಶರ್ಟ್ ಮತ್ತು ಲುಂಗಿ ಧರಿಸಿ, ತಲೆಗೆ ಒಂದು ಮುಂಡಾಸು ಕಟ್ಟಿದ ಹಿರಿಯ ನ್ಯಾಯಾಧೀಶ ಟ್ರಾಕ್ಟರ್‌ನಲ್ಲಿ ಕುಳಿತು ಉಳುಮೆ ಮಾಡುತ್ತಿರುವುದು ವೀಡಿಯೋದಿಂದ ತಿಳಿದು ಬರುತ್ತದೆ.

62ನೇ ವಯಸ್ಸಿನಲ್ಲಿ ನಿವೃತ್ತಿ ಪಡೆದ ನಂತರ ಹತ್ತಿರದಲ್ಲಿರುವ ಶಿವಗಂಗಾಗಾ ಜಿಲ್ಲೆಯ ತಿರುಪಟ್ಟೂರ್ ತಾಲೂಕಿನ ಪುಲುವಂಕುರುಚಿಗೆ ತೆರಳಿದ ಸೆಲ್ವಮ್, ತಾನು ಮಾಡಲು ಬಯಸಿದ್ದ ಕೃಷಿ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಹೈಕೋರ್ಟ್ ನ್ಯಾಯಪೀಠದ ಸದಸ್ಯರಲ್ಲಿ ಒಬ್ಬರಾಗಿ 13 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಸೆಲ್ವಮ್ ಇದೀಗ ಕೃಷಿಕನಾಗಿ ಮಾದರಿಯಾಗಿರುವ ಸುದ್ದಿ ಜಾಲತಾಣಗಳಲ್ಲಿ ವೇಗವಾಗಿ ಹರಡಿದೆ. ಈ ಬಗ್ಗೆ ಅವರಲ್ಲಿ ಹೇಳಿದಾಗ ‘‘ಅನೇಕ ವರ್ಷಗಳಿಂದ ನಾನೇನು ಬಯಸಿದ್ದೇನೆಯೋ ಅದನ್ನೆ ಈಗ ಮಾಡುತ್ತಿರುವುದಾಗಿ ನಗುತ್ತಾ ಪ್ರತಿಕ್ರಿಯಿಸುತ್ತಾರೆ.ಈ ವೃತ್ತಿಯಲ್ಲಿ ಹಿಂದಿನ ನ್ಯಾಯಾಧೀಶ ವತ್ತಿಗಿಂತ ಬಹಳ ಭಿನ್ನತೆಯನ್ನು ಅನುಭವಿಸುವುದಿಲ್ಲ ಏಕೆಂದರೆ ಕೃಷಿ ನನ್ನ ಮೂಲ ವೃತ್ತಿಯಾಗಿದೆ’’ ಎಂದು ಅವರು ಹೇಳುತ್ತಾರೆ.

ಸೆಲ್ವಮ್ ಅವರು ಕೃಷಿಕ ಕುಟುಂಬದಲ್ಲೆ ಹುಟ್ಟಿ ಬೆಳೆದಿದ್ದಾರೆ. ಅವರ ಕುಟುಂಬವು 100 ವರ್ಷಗಳಿಂದ ಕಷಿಕಾರ್ಯ ಮಾಡುತ್ತಾ ಬಂದಿದೆ. ‘‘ಅದೃಷ್ಟವಷಾತ್  ಅಥವಾ ದುರದೃಷ್ಟವಷಾತ್ ನಾನು ಚೆನ್ನಾಗಿ ಕಲಿತಿದ್ದೇನೆ. ಚೆನ್ನಾಗಿ ಕಲಿಯುತಿದ್ದ ಕಾರಣ ನನ್ನನ್ನು ಕಾನೂನು ಅಧ್ಯಯನ್ಕಕಾಗಿ ನನ್ನನ್ನು ಮಧುರೈಗೆ ಕಳುಹಿಸಲಾಗಿತ್ತು’’ ಎಂದು ಮದುರೈ ಮತ್ತು ಚೆನ್ನೆೃಯಲ್ಲಿ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ ಸೆಲ್ವಮ್ ಅವರು ವಿವರಿಸುತ್ತಾರೆ. ಈ ವರ್ಷದ ಎಪ್ರೀಲ್‌ನಲ್ಲಿ ನಿವತ್ತಿ ಹೊಂದಿದ್ದ ಅವರು ಪುಲುವಂಕುರುಚಿಯಲ್ಲಿರುವ ತನ್ನ ಪೂರ್ವಿಕ ಸ್ಥಳದ ಐದು ಎಕರೆ ಪ್ರದೇಶದಲ್ಲೀಗ ಕೃಷಿ ಕಾರ್ಯ ಕೈಗೊಂಡಿದ್ದಾರೆ. ಸೆಲ್ವಮ್ ಅವರು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಕೃಷಿ ಭೂಮಿಯಲ್ಲಿ ದುಡಿಯುತ್ತಾರೆ. ಅವರೇ ಸ್ವತಃ ಟ್ರಾಕ್ಟರ್ ಚಲಾಯಿಸುತ್ತಾ ಉಳುಮೆ ನಡೆಸುತ್ತಾರೆ. ಕಷಿಗೆ ಸಂಬಂಧಿಸಿದ ಎಲ್ಲ ಜ್ಞಾನವೂ ಅವರಿಗಿದೆ. ‘‘ ಈಗ ಭತ್ತ ಬಿತ್ತಿದ್ದೇನೆ. ಒಮ್ಮೆ ಅದನ್ನು ಕೊಯ್ದ ಬಳಿಕ ಕೃಷಿ ಹಾಗೂ ಶೇಂಗಾ ಬೆಳೆಯುತ್ತೇನೆ.’’ಎಂದು ಎಂದು ಹೇಳಿದ ಸೆಲ್ವಮ್ ತನ್ನ ಕೃಷಿ ಭೂಮಿಗೆ ಇತರೆ ಯಾರಿಗಾದರೂ ಪಾವತಿಸಿ ದುಡಿಸುವುದಕ್ಕಿಂತ ಸ್ವತಃ ತಾನೇ ಆ ಚಟುವಟಿಕೆಗಳನ್ನು ಮಾಡುವುದರಿಂದ ಮತ್ತು ಕಲಿಯುದರಿಂದ ಹೆಚ್ಚು ತಪ್ತಿ ಸಿಗುತ್ತದೆ ಎಂದು ತಿಳಿಸುತ್ತಾರೆ.

‘‘ಕಾನೂನು ಕ್ಷೇತ್ರ ಈಗ ಮುಗಿದ ಅಧ್ಯಾಯ’’
1981 ರಲ್ಲಿ ತಿರುವನ್ನಾಮಲೈ ನ್ಯಾಯಾಲಯದಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗುವ ಮೂಲಕ ಕಾನೂನು ವೃತ್ತಿ ಪ್ರಾರಂಭಿಸಿದ ಎ. ಸೆಲ್ವನ್ ಅವರು ಮೆದ್ರಾಸ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದವವರೆಗೆ ಕಾನೂನು ಕ್ಷೇತ್ರದಲ್ಲಿ ದುಡಿದಿದ್ದಾರೆ. ತನ್ನ 31 ವರ್ಷದವ ವೃತ್ತಿ ಜೀವನದಲ್ಲಿ ಮುಕ್ತನ್ಯಾಯಾಲಯದಲ್ಲಿ ಕನಿಷ್ಠ ಹತ್ತು ತೀರ್ಪು ನೀಡಿದ್ದಾರೆ ಮತ್ತು ಕೆಲವು ಪ್ರಕರಕರಣಗಳ ತೀರ್ಪನ್ನು ಅವರು ಕಾಯ್ದಿರಿಸಿದ್ದಾರೆ. ನ್ಯಾಯಾಂಗದಲ್ಲಿನ ತಮ್ಮ ಸುದಿರ್ಘ ಜೀವನವನ್ನು ನೆನಪಿಸಿದ ಅವರು‘‘ ನನ್ನ ವ್ಯಯಕ್ತಿಕ ಅನುಭವದ ಮೂಲಕ ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ ಎಂದು ನಾನು ಹೇಳಬಲ್ಲೆ. ನಾನು ಇಡೀ ನ್ಯಾಯಾಂಗ ವ್ಯವಸ್ಥೆಯನ್ನೆ ದೂರುತ್ತಿಲ್ಲ. ಆದರೆ ಇದು ಇಲ್ಲಿ ಭ್ರಷ್ಟರಾಜಕಾರಣಿಗಳಿಗೆ ಹುಲುಸಾಗಿ ಬೆಳೆಯಲು ನೆರವಾಗುತ್ತದೆ. ನ್ಯಾಯ ವಯವಸ್ಥೆಯು ಸ್ವತಂತ್ರವಾಗಬೇಕಿದೆ ಮತ್ತು ಅದು ಜನರಿಗೆ ಸೇವೆ ಸಲ್ಲಿಸುವ ಕೆಲಸವನ್ನು ಮಾಡಬೇಕಿದೆ’’ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ತನ್ನ ನಿವೃತ್ತಿ ದಿನವೇ ಅಧಿಕಾರವಧಿಯಲ್ಲಿ ಬಳಸುತ್ತಿದ್ದ ಕಾರಿನ ಕೀಲಿಯನ್ನು ತಕ್ಷಣ ಹಿಂದಿರುಗಿಸಿದ್ದಾರೆ. ತನ್ನ ಖಾಸಗಿ ಕಾರಿನಿಂದಲೆ ಮದ್ರಾಸ್ ಹ್ಯಕೋರ್ಟ್‌ನಿಂದ ಹಿಂದಿರುಗಿ ಪ್ರಾಮಾಣಿಕತೆ ಮೆರೆದಿದ್ದಾರೆ. ಇದೀಗ ಕಾನೂನು ಕ್ಷೇತ್ರ ಅವರಿಗೆ ಮುಗಿದ ಅಧ್ಯಾಯವಾಗಿದೆ. ‘‘ನನ್ನ ಭೂಮಿಯಲ್ಲಿ ಕೃಷಿ ಮಾಡುತ್ತಿರುವುದು ನನಗೆ ನಿಜವಾದ ಸಂತೋಷವನ್ನು ಕೊಡುತ್ತಿದೆ. ಅಲ್ಲದೆ ಭೂಮಿಯು ಉತ್ತಮ ಫಸಲನ್ನು ನೀಡುತ್ತಿದೆ. ಪ್ರಕತಿಯ ಮಧ್ಯದಲ್ಲಿ ಒಂದು ರೀತಿಯಲ್ಲಿ ಉತ್ತಮ ಅನುಭವವನ್ನು ನಿಡುತ್ತದೆ’’ ಎಂದು ಹೇಳುತ್ತಾರೆ ಮಾಜಿ ನ್ಯಾಯಾಧೀಶ ಎ. ಸೆಲ್ವಮ್

LEAVE A REPLY

Please enter your comment!
Please enter your name here