ಮದುವೆಯಾಗುವಂತೆ ನಂಬಿಸಿದ್ದ, ಈಗ ಜಾತಿ ಕಾರಣ ನೀಡಿ ನಿರಾಕರಿಸಿದ: ಯುವತಿ ಆರೋಪ

Prasthutha|

ಉಡುಪಿ: ಐದು ವರ್ಷಗಳ ಕಾಲ ಪ್ರೀತಿಸಿ, ಮದುವೆಯಾಗುವಂತೆ ನಂಬಿಸಿದ್ದ ಉಡುಪಿಯ ವಕೀಲ ಸುಕುಮಾರ್ ಶೆಟ್ಟಿ ಇದೀಗ ಜಾತಿಯ ನೆಪವೊಡ್ಡಿ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಸಂತ್ರಸ್ತೆಯ ಸಂಬಂಧಿ ಉಮೇಶ್ ಆಪಾದಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಬ್ಬರೂ 2015ರಿಂದ ಪ್ರೀತಿಸುತ್ತಿದ್ದು, ಯುವತಿಯನ್ನು ಮದುವೆಯಾಗುವಂತೆ ನಂಬಿಸಿದ ಸುಕುಮಾರ್ ಬಲತ್ಕಾರವಾಗಿ ದೈಹಿಕ ಸಂಪರ್ಕ ಮಾಡಿ ವಂಚನೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ.

- Advertisement -

2020ರ ಜುಲೈನಲ್ಲಿ ಮದುವೆ ಆಗುವಂತೆ ಕೇಳಿಕೊಂಡಿದ್ದ ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದನು. ಅಲ್ಲದೇ ‘ನಮ್ಮಿಬ್ಬರ ಜಾತಿ ಬೇರೆ ಬೇರೆ ಆದ ಕಾರಣ ನಾವು ಮದುವೆ ಆಗಲು ಸಾಧ್ಯವಿಲ್ಲ. ಮದುವೆಯಾದರೆ ನಾನು ನನ್ನ ಕುಟುಂಬವನ್ನು ಕಳೆದುಕೊಳ್ಳಬೇಕಾಗಬಹುದು’ ಎಂದು ನೆಪ ಹೇಳಿ ಮದುವೆಗೆ ನಿರಾಕರಿಸಿದ್ದಾನೆ ಎಂದು ಉಮೇಶ್ ಆಪಾದಿಸಿದರು.

ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದರೂ ಆರೋಪಿಯನ್ನು ಬಂಧಿಸಿಲ್ಲ. ಆರೋಪಿಯ ಕಡೆಯವರು ಯುವತಿಗೆ ಹಾಗೂ ನನಗೆ ಕರೆ ಮಾಡಿ ಜೀವಬೆದರಿಕೆ ಹಾಕಿದ್ದಾರೆ. ಸುಕುಮಾರ್ ಹಲವಾರು ಯುವತಿ, ಮಹಿಳೆಯರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾನೆ. ಆರೋಪಿಯ ವಿರುದ್ಧ ಕ್ರಮ ಕೈಕೊಂಡು ಸಂತ್ರಸ್ತೆಗೆ ನ್ಯಾಯ ಒದಗಿಸಬೇಕು ಎಂದು ಉಮೇಶ್ ಆಗ್ರಹಿಸಿದ್ದಾರೆ.

- Advertisement -