ಮತ್ತೆ ‘ಲಸಿಕೆ ರಾಜಕೀಯ’: ತಮಿಳುನಾಡು ಮುಖ್ಯಮಂತ್ರಿಯಿಂದ ಉಚಿತ ಕೊರೋನಾ ಲಸಿಕೆ ಭರವಸೆ

Prasthutha|

ಕೊರೊನಾ ವೈರಸ್ ಲಸಿಕೆ ಸಿದ್ಧವಾದ ಬಳಿಕ ರಾಜ್ಯದ ಜನರಿಗೆ ಅದನ್ನು ಉಚಿತವಾಗಿ ನೀಡಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಗುರುವಾರ ಪ್ರಕಟಿಸಿದ್ದಾರೆ. ಮುಂದಿನ ವರ್ಷದ ಅಕ್ಟೋಬರ್ 7ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತಮಿಳುನಾಡು ಸರಕಾರದ ಈ ನಿರ್ಣಯ ಹೊರಬಿದ್ದಿದೆ.

ಬಿಹಾರದಲ್ಲಿ ಚುನಾವಣೆಗೆ ಮುಂಚಿತವಾಗಿ “ಎಲ್ಲರಿಗೂ ಉಚಿತ ಕೊರೋನಾ ವೈರಸ್ ಲಸಿಕೆ” ಎಂಬ ಬಿಜೆಪಿ ವಿವಾದಾಸ್ಪದ ಭರವಸೆ ನೀಡಿದ ಬಳಿಕ ತಮಿಳುನಾಡು ಸರಕಾರ ಈ ಭರವಸೆಯನ್ನು ಪ್ರಕಟಿಸಿದೆ.

- Advertisement -

ಬಿಹಾರ ಅಸೆಂಬ್ಲಿ ಚುನಾವಣೆಯ ಪ್ರಣಾಳಿಕೆಯನ್ನು ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಇಂದು ಬಿಡುಗಡೆಗೊಳಿಸಿದ್ದು, ಐಸಿಎಂಆರ್ ನಿಂದ ಅನುಮೋದನೆ ದೊರೆತ ಬಳಿಕ ಎಲ್ಲರಿಗೂ ಉಚಿತ ಕೊರೋನಾ ಲಸಿಕೆಯನ್ನು ನೀಡುವುದಾಗಿ ಭರವಸೆಯನ್ನು ನೀಡಲಾಗಿದೆ.

- Advertisement -