ಮತದಾರ ಕಲಿಸಿದ ಪಾಠ

0
55

ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಆಡಳಿತಾರೂಢ ಪಕ್ಷಗಳತ್ತ ಮತದಾರನ ಒಲವು ಮತ್ತು ವಿಪಕ್ಷಗಳ ಅಸ್ತಿತ್ವವನ್ನೇ ಬುಡಮೇಲುಗೊಳಿಸುವ ರೀತಿಯಲ್ಲಿ ಮತಗಟ್ಟೆ ಸಮೀಕ್ಷೆಗಳ ವಿಶ್ಲೇಷಣೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ಆದರೆ ಹೊರಬಿದ್ದ ಫಲಿತಾಂಶ  ಮಾತ್ರ ವ್ಯತಿರಿಕ್ತವಾಗಿತ್ತು.

ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆ ಚುನಾವಣೆಯೊಂದಿಗೆ 18 ರಾಜ್ಯಗಳ 51 ವಿಧಾನಸಭೆಗಳು ಮತ್ತು 2 ಲೋಕಸಭೆಗಳಿಗೆ ಉಪ ಚುನಾವಣೆ ನಡೆದಿತ್ತು. ಬಿಜೆಪಿ ಅರ್ಧಕ್ಕಿಂತ ಹೆಚ್ಚು ಸೀಟುಗಳನ್ನು ಪಡೆದುಕೊಂಡಿದ್ದರೂ, ಅದು ಮೊದಲಿಗಿಂತ ಹೆಚ್ಚು ನಷ್ಟವನ್ನು ಅನುಭವಿಸಿದೆ. ಈ ಚುನಾವಣೆಯು ಅದಕ್ಕೆ ಸಂಭ್ರಮಿಸುವಂತಹ ಫಲಿತಾಂಶವನ್ನು ತಂದುಕೊಟ್ಟಿಲ್ಲ ಎಂಬುದಕ್ಕೆ ತನ್ನ ಭದ್ರಕೋಟೆ ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿ ಕಂಡಿರುವ ಹಿನ್ನಡೆಯೇ ಸಾಕ್ಷಿಯಾಗಿದೆ. ಇದೀಗ ಬಿಜೆಪಿ-ಶಿವಸೇನೆ ಮೈತ್ರಿಕೂಟವು ಮಹಾರಾಷ್ಟ್ರದಲ್ಲಿ ಹೆಚ್ಚು ಸೀಟುಗಳನ್ನು ಪಡೆಯಲು ಯಶಸ್ವಿಯಾಗಿದೆ. ಆದರೆ ಅದರ ಬಹುಮತದಲ್ಲಿ ಇಳಿಕೆ ಕಂಡು ಬಂದಿದೆ. 2014ರ ಚುನಾವಣೆಯಲ್ಲಿ ಶಿವಸೇನೆಯ ಮೈತ್ರಿ ಇಲ್ಲದೆಯೇ ಸ್ಪರ್ಧಿಸಿದ್ದ ಬಿಜೆಪಿ 122 ಸ್ಥಾನ ಪಡೆದುಕೊಳ್ಳುವುದರ ಮೂಲಕ ಅದ್ಭುತ ಗೆಲುವು ಸಾಧಿಸಿತ್ತು. ಆದರೆ ಮೈತ್ರಿ ನಡೆಸಿದ್ದರೂ ಈ ಬಾರಿ ಅದು 105 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಬಿಜೆಪಿ-ಶಿವಸೇನೆಯ ಮೈತ್ರಿಕೂಟದ ನೆಲೆಯು ಕಂಪನಕ್ಕೊಳಗಾಗಿದೆ ಎಂಬಂದೂ ಸ್ಪಷ್ಟವಾಗಿದೆ.

ಜ್ವಲಂತ ಸಮಸ್ಯೆಗಳಿಗೆ ಎದುರಾಗಿ ಮೋದಿ-ಶಾ ಜೋಡಿಯು ಚುನಾವಣೆಯಲ್ಲಿ ನಡೆಸಿದ ಭಾವನಾತ್ಮಕ ಸರ್ಜಿಕಲ್ ಸ್ಟ್ರೈಕ್ ಠುಸ್ಸಾಗಿದೆ. ರಾಷ್ಟ್ರೀಯವಾದ, 370 ವಿಧಿ ರದ್ದತಿ ಮತ್ತಿತರ ಭಾವನಾತ್ಮಕ ವಿಚಾರಗಳ ಮೂಲಕ ಸುಳ್ಳು ಮತ್ತು ಭ್ರಮೋತ್ಪಾದನೆಯ ರಾಜಕಾರಣವು ದೇಶದಲ್ಲಿ ಭೀತಿ, ಪರಸ್ಪರ ಅಪನಂಬಿಕೆಯ ವಾತಾವರಣವನ್ನು ಸೃಷ್ಟಿಸುತ್ತಿದೆ. ಇದು ದೇಶವು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಗೆ ಪರಿಹಾರವಾಗಲಾರದು ಎಂಬ ವಾಸ್ತವವನ್ನು ಜನರು ಅರಿತುಕೊಳ್ಳುತ್ತಿದ್ದಾರೆ ಎಂಬ ವಿಚಾರವು ಈ ಬಾರಿಯ ಫಲಿತಾಂಶದಲ್ಲಿ ಪ್ರತಿಬಿಂಬಿತವಾಗಿದೆ.

ಹಲವು ಅಡೆತಡೆಗಳನ್ನು ಎದುರಿಸಿಯೂ ಎನ್‌ಸಿಪಿ ಉತ್ತಮ ನಿರ್ವಹಣೆಯನ್ನು ತೋರಿದೆ. ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವವು ಈ ಬಾರಿ ಮಹಾ ಚುನಾವಣೆಯಲ್ಲಿ ಮಹತ್ವದ ಪಾತ್ರವಹಿಸದಿದ್ದರೂ, ಕಳೆದ ಬಾರಿಗಿಂತ ಒಂದೆರಡು ಸ್ಥಾನಗಳನ್ನು ಹೆಚ್ಚು ಪಡೆದಿದೆ. ಇದು ಪಕ್ಷದಲ್ಲಿ ಗಾಂಧಿ ಕುಟುಂಬದ ನಿಯಂತ್ರಣದ ಆಚೆಗೂ ಸ್ಥಳೀಯ ನಾಯಕತ್ವದ ಕುರಿತು ಪರ್ಯಾಲೋಚಿಸಬೇಕಾದ ಮಹತ್ವದ ಪಾಠವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದೆ.

ಹರ್ಯಾಣದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಅಲ್ಲಿನ ವಿಧಾನಸಭೆಯು ಅತಂತ್ರ ಜನಾದೇಶವನ್ನು ಪಡೆದುಕೊಂಡಿದೆ. ಇಲ್ಲಿ ಕುಂಜಿ ದುಷ್ಯಂತ್ ಚೌಟಾಲಾ ಮತ್ತು ಪಕ್ಷೇತರರು ಕಿಂಗ್ ಮೇಕರ್ ಆಗಿದ್ದಾರೆ. ಕಳೆದ ಬಾರಿ ಸರಳ ಬಹುಮತದಿಂದ ಅಧಿಕಾರಕ್ಕೇರಿದ್ದ ಬಿಜೆಪಿ ಈ ಬಾರಿ ಇತರರನ್ನು ಆಶ್ರಯಿಸಬೇಕಾದ ಅನಿವಾರ್ಯತೆಯಲ್ಲಿದೆ. ಇಲ್ಲಿ ಕೊನೆ ಗಳಿಗೆಯ ರಾಜಕೀಯ ಉತ್ಸಾಹವು ಕಾಂಗ್ರೆಸ್‌ಗೆ ಚೇತರಿಕೆಯನ್ನು ನೀಡಿದೆ.

ಇನ್ನು ಪಕ್ಷಾಂತರಿಗಳಿಗೂ ಜನತಂತ್ರದಲ್ಲಿ ಉಳಿಗಾಲವಿಲ್ಲ ಎಂಬ ವರ್ತಮಾನವು ಈ ಚುನಾವಣೆಯ ವೈಶಿಷ್ಟವಾಗಿದೆ. ಹಿಂದುಳಿದ ವರ್ಗಗಳ ನಾಯಕನಾಗಿ ಗುರುತಿಸಿಕೊಂಡು ಕಳೆದ ಬಾರಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಚೊಚ್ಚಲ ಗೆಲುವು ಸಾಧಿಸಿದ್ದ ಅಲ್ಪೇಶ್ ಠಾಕೂರ್, ಅದೇ ರೀತಿ ಧವಳಸಿಂಹ ಜಾಲಾ ಬಳಿಕ ಬಿಜೆಪಿಗೆ ಪಕ್ಷಾಂತರಗೊಂಡು ಈ ಬಾರಿಯ ಚುನಾವಣೆಯಲ್ಲಿ ಸೋಲಿಗೆ ಶರಣಾಗಿದ್ದಾರೆ. ಅದರ ಜೊತೆಗೆ ಎನ್‌ಸಿಪಿ ಶಾಸಕನಾಗಿ ನಂತರ ಬಿಜೆಪಿ ಹಾರಿದ್ದ ಉದಯನ್‌ರಾಜೇ ಭೋಸ್ಲೆ ಅದೇ ಕ್ಷೇತ್ರದಿಂದ ಸ್ಪರ್ಧಿಸಿದ್ದರೂ ಗೆಲುವಿನ ದಡ ತಲುಪಲಾಗಲಿಲ್ಲ. ಈ ಪ್ರಮುಖರಿಗೆ ಆಗಿರುವ ಕಹಿ ಅನುಭವವು ಪಕ್ಷಾಂತರ ರಾಜಕೀಯ ನಡೆಸುವ ಅವಕಾಶವಾದಿಗಳಿಗೆ ಎಚ್ಚರಿಕೆಯ ಕರೆಗಂಟೆಯನ್ನು ಬಾರಿಸಿದೆ.

ಒಟ್ಟಿನಲ್ಲಿ ಈ ಚುನಾವಣಾ ಫಲಿತಾಂಶವು ಆಡಳಿತ ಪಕ್ಷಕ್ಕೂ, ವಿಪಕ್ಷಗಳಿಗೂ, ಪಕ್ಷಾಂತರಿಗಳಿಗೂ ಸ್ಪಷ್ಟ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಅಂದ ಹಾಗೆ ಜನತಂತ್ರದಲ್ಲಿ ಜನರೇ ಶಕ್ತಿಶಾಲಿಗಳಾಗಿರುತ್ತಾರೆ ಎಂಬ ವಾಸ್ತವವನ್ನು ಎಲ್ಲಾ ರಾಜಕೀಯ ಪಕ್ಷಗಳು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ.

LEAVE A REPLY

Please enter your comment!
Please enter your name here