ಮತದಾರರ ಪಟ್ಟಿ: 3 ಕೋಟಿ ಮುಸ್ಲಿಮರು, 4 ಕೋಟಿ ದಲಿತರ ಹೆಸರುಗಳು ನಾಪತ್ತೆ!

0
271

ಹೊಸದಿಲ್ಲಿ: ದೇಶದ 11 ಕೋಟಿ ಅರ್ಹ ಮತದಾರರ ಪೈಕಿ ಸುಮಾರು 3 ಕೋಟಿ ಮುಸ್ಲಿಮರು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದ್ದಾರೆ ಎಂದು ಸಾಫ್ಟ್‌ವೇರ್ ಇಂಜಿನಿಯರ್ ಖಾಲಿದ್ ಸಫೀಯುಲ್ಲಾ ಹೇಳಿದ್ದಾರೆ.

ಮತದಾರರ ಪಟ್ಟಿಯಿಂದ ಎಷ್ಟು ಮುಸ್ಲಿಮರು ಮತ್ತು ದಲಿತರು ನಾಪತ್ತೆಯಾಗಿದ್ದಾರೆ ಎಂದು ಕಂಡುಹಿಡಿಯಲು, ಹೈದರಾಬಾದ್ ಮೂಲದ ರೇಲ್ಯಾಬ್ಸ್‌ನ ಸಿಇಒ ಮತ್ತು ಮಿಸ್ಸಿಂಗ್ ವೋಟರ್ಸ್‌ ಆ್ಯಪ್‌ನ ಮತ್ತು ಸ್ಥಾಪಕ ಸಫೀಯುಲ್ಲಾರವರು ಒಂದು ಅಧ್ಯಯನವನ್ನು ಕೈಗೊಂಡಿದ್ದರು. ಮತದಾರರ ಪೈಕಿ ಶೇ.15ರಷ್ಟು ಮತ್ತು ಶೇ.25ರಷ್ಟು ಮುಸ್ಲಿಮ್ ಮತದಾರರು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದ್ದಾರೆ ಎಂಬುದನ್ನು ಅವರು ಪತ್ತೆಹಚ್ಚಿದ್ದಾರೆ. ಆದುದರಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಮತದಾರರ ಪೈಕಿ ಸುಮಾರು 12.7 ಕೋಟಿ ಮತದಾರರು ಮತ್ತು ಮೂರು ಕೋಟಿ ಮುಸ್ಲಿಮರಿಗೆ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ.

ಅವರ ಅಧ್ಯಯನದ ಪ್ರಕಾರ, ಸುಮಾರು 20 ಕೋಟಿ ದಲಿತ ಮತದಾರರಲ್ಲಿ 4 ಕೋಟಿ ದಲಿತರು ಮತದಾನ ಪಟ್ಟಿಯಿಂದ ಹೊರಬಿದ್ದಿದ್ದಾರೆ. 2014ರಲ್ಲಿ ನಡೆದ ಕೊನೆಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಪಟ್ಟಿಯಿಂದ ಲಕ್ಷಾಂತರ ಮುಸ್ಲಿಮರ ಹೆಸರು ನಾಪತ್ತೆಯಾಗಿ ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಾಗ, ಅವರು ಮೊದಲು ಈ ವ್ಯತ್ಯಾಸವನ್ನು ಗಮನಿಸಿದರು.

ಅವರು ಗುಜರಾತ್ ರಾಜ್ಯವನ್ನು ಅಧ್ಯಯನ ಮಾಡಿದ್ದು, ಅಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನಾಪತ್ತೆಯಾಗಿದ್ದರಿಂದ ಲಕ್ಷಾಂತರ ಮುಸ್ಲಿಮರು ಮತ ಚಲಾಯಿಸಲು ಸಾಧ್ಯವಾಗಿರಲಿಲ್ಲ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಗುಜರಾತಿನ 16 ವಿಧಾನಸಭಾ ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದ ಮುಸ್ಲಿಮ್ ಮತದಾರರ ಹೆಸರು ಪಟ್ಟಿಯಲ್ಲಿರಲಿಲ್ಲ. ಸಫೀಯುಲ್ಲಾರವರು 800 ಅಸ್ಸೆಂಬ್ಲಿ ಕ್ಷೇತ್ರಗಳ ದತ್ತಾಂಶವನ್ನು ಅಧ್ಯಯನ ನಡೆಸಿದ್ದು, 1.6 ಕೋಟಿ ಮತದಾರರ ಪಟ್ಟಿಯಿಂದ ನಾಪತ್ತೆಯಾದ ಮತದಾರರ ಮನೆಗಳನ್ನು ಗುರುತಿಸಿದ್ದಾರೆ.

ದೇಶಾದ್ಯಂತ ಹೆಚ್ಚಿನ ಮತದಾರರ ಹೆಸರು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದ್ದು, ಈ ಪೈಕಿ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ದೇಶಾದ್ಯಂತದ ಮತದಾನ ಪಟ್ಟಿಯಿಂದ 21 ದಶಲಕ್ಷ ಮಹಿಳೆಯರ ಹೆಸರು ನಾಪತ್ತೆಯಾಗಿದೆ. ಈ ಮಾಹಿತಿಯ ಆಧಾರದ ಮೇಲೆ ಅವರು ಅಧ್ಯಯನ ನಡೆಸಿದ್ದಾರೆ ಮತ್ತು ಮಿಸ್ಸಿಂಗ್ ವೋಟರ್ಸ್‌ ಆ್ಯಪ್‌ಅನ್ನು ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಈ ಉಚಿತ ಮೊಬೈಲ್ ಆ್ಯಪ್‌ನಲ್ಲಿ, ಕ್ಷೇತ್ರಗಳ ರಸ್ತೆ ಹೆಸರುಗಳ ವಿವರ ಮತ್ತು ಪ್ರತೀ ರಸ್ತೆಯಲ್ಲಿರುವ ಮನೆಗಳ ಸಂಖ್ಯೆ ಹಾಗೂ ಪ್ರತೀ ಮನೆಯ ಮತದಾರರ ಸಂಖ್ಯೆಯನ್ನು ಹೊಂದಿದೆ. ನಾಪತ್ತೆಯಾದ ಮತದಾರರನ್ನು ಗುರುತಿಸಲು ಈ ಆ್ಯಪ್‌ಅನ್ನು ಬಳಸಬಹುದಾಗಿದೆ. ಮಾತ್ರವಲ್ಲದೆ, ಆನ್‌ಲೈನ್‌ನಲ್ಲಿ ಹೊಸ ಮತದಾನದ ಐಡಿಗಾಗಿ ಅರ್ಜಿಯನ್ನು ಸಲ್ಲಿಸಲು ಈ ಆ್ಯಪ್‌ಅನ್ನು ಬಳಸಬಹುದಾಗಿದೆ.

LEAVE A REPLY

Please enter your comment!
Please enter your name here