August 26, 2020

ಮಂಗಳೂರು ಸೆಂಟ್ರಲ್ ಮಾರ್ಕೆಟ್ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮುಸ್ತಫಾ ನಿಧನ

ಮಂಗಳೂರು : ನಗರದ ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ. ಮುಸ್ತಫಾ ಕುಂಞಿ (59) ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಹಣ್ಣು ಹಂಪಲು ವ್ಯಾಪಾರಿಯಾಗಿದ್ದ ಮುಸ್ತಫಾ ಅವರು ಮಾರುಕಟ್ಟೆಯಲ್ಲಿ ಎಂಎಂಕೆ ಎಂದೇ ಜನಪ್ರಿಯರಾಗಿದ್ದರು. ಮೂಲತಃ ತೊಕ್ಕೊಟ್ಟು ಸಮೀಪದ ಕುಂಪಲದವರಾದ ಮುಸ್ತಫಾ, ಪ್ರಸ್ತುತ ನಗರದ ಬೋಳಾರದ ಫ್ಲ್ಯಾಟ್ ಒಂದರಲ್ಲಿ ವಾಸವಿದ್ದರು. ಅನಾರೋಗ್ಯಕ್ಕೀಡಾಗಿ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಪತ್ನಿ, ಓರ್ವ ಮಗ ಹಾಗೂ ಮಗಳ ಸಹಿತ ಅಪಾರ ಬಂಧು-ಬಳಗವನ್ನು ಅವರು ಅಗಲಿದ್ದಾರೆ. ಮಗ ವಿದೇಶದಲ್ಲಿದ್ದು, ನಾಳೆ ಊರಿಗೆ ಆಗಮಿಸಲಿರುವುದರಿಂದ ಮೃತರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ ಮಂಗಳೂರಿನ ಕೇಂದ್ರ ಜುಮಾ ಮಸೀದಿಯಲ್ಲಿ ನೆರವೇರಲಿದೆ.

ಟಾಪ್ ಸುದ್ದಿಗಳು

ವಿಶೇಷ ವರದಿ