ಮಂಗಳೂರು : ಎನ್ಇಇಟಿ (ನೀಟ್) ಪರೀಕ್ಷೆಯಲ್ಲಿ ಮಂಗಳೂರಿನ ಫಲ್ಕಾನ್ ಗ್ರೂಪ್ ಆಫ್ ಇನ್ಸ್ ಟಿಟ್ಯೂಶನ್ಸ್ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದು, ಸಂಸ್ಥೆಯ ಮೊದಲ ವರ್ಷದ ತಂಡವೇ ಅದ್ಭುತ ಸಾಧನೆಯನ್ನು ಪ್ರದರ್ಶಿಸಿದೆ. ಮಂಗಳೂರು ಶಾಹೀನ್ಸ್ ಪಿಯು ಕಾಲೇಜು ವಿದ್ಯಾರ್ಥಿಗಳ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಾಧಕ ವಿದ್ಯಾರ್ಥಿಗಳನ್ನು ಕದ್ರಿ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಭಿನಂದಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ, ಮಂಗಳೂರು ಶಾಸಕ ಯು.ಟಿ. ಖಾದರ್, ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ಶಾಹಿನ್ ಫಲ್ಕಾನ್ ನ ಮಂಗಳೂರು ಕ್ಯಾಂಪಸ್ ಆರಂಭವಾದ ಮೊದಲ ವರ್ಷವೇ ಅತ್ಯುತ್ತಮ ಫಲಿತಾಂಶ ನೀಡಿದ ಕಾಲೇಜು ಆಡಳಿತ ಮಂಡಳಿ, ಬೋಧಕ ವರ್ಗ, ಸಿಬ್ಬಂದಿಗೆ ಖಾದರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಹಲವಾರು ಅಡೆತಡೆಗಳನ್ನು ಮೀರಿ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ ಎಂದ ಸಂಸ್ಥೆಯ ಆಡಳಿತ ಸಿಬ್ಬಂದಿ ಡಿಟಿಎಂ ಶಮೀರ್ ಅಹಮದ್ ವಿದ್ಯಾರ್ಥಿಗಳ ಹಿನ್ನೆಲೆ ವಿವರಿಸಿದರು. ಆಡಳಿತ ನಿರ್ದೇಶಕ ಅಬ್ದುಲ್ ಸುಭಾನ್ ಅವರು ಎಲ್ಲ ಟಾಪರ್ ವಿದ್ಯಾರ್ಥಿಗಳನ್ನು ಅಭಿನಂಬಿಸಿ, ಮಾತನಾಡಿದರು. “ಭವಿಷ್ಯದಲ್ಲಿ ನಿಮ್ಮಲ್ಲಿ ಎಲ್ಲರೂ ಉತ್ತಮ ಜೀವನ ರೂಪಿಸುತ್ತೀರಿ ಮತ್ತು ಸಮಾಜ, ದೇಶ ಮತ್ತು ಜಗತ್ತಿಗೆ ಉತ್ತಮ ಕೊಡುಗೆ ನೀಡುತ್ತೀರಿ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ’’ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಸಂಸ್ಥೆಯ ಮೊದಲ ತಂಡದ ಸಾಧಕರಲ್ಲಿ ಬೀಬಿ ಮರಿಯಮ್ ಶಮ್ಮಾ (588), ಸಫೀನಾ ಝೈನಾಬ್ (555), ಫಾತಿಮಾ ಹಿಬಾ (502), ಫಾತಿಮಾ ಝುಹೇರಾ (476), ಆಫ್ಸ್ಯಾ (453), ಶ್ರೀನಿಧಿ ನಾಯಕ್ (451), ಝುಲೇಖ ಶೇಝಿಲ್ (400) ಮುಂತಾದವರು ಅಭಿನಂದನೆಗೊಳಪಟ್ಟವರು.