ಮಂಗಳೂರು | ಪೊಲೀಸರ ಮೇಲೆ ತಲವಾರು ದಾಳಿ

Prasthutha|

ಕರ್ತವ್ಯದಲ್ಲಿ ನಿರತರಾಗಿದ್ದ ಬಂದರ್ ಠಾಣೆಯ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಗಣೇಶ್ ಅವರ ಮೇಲೆ ಕಿಡಿಗೇಡಿಯೋರ್ವ ತಲವಾರಿನಿಂದ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ರಥಬೀದಿ ಸಮೀಪದ ಚಿತ್ರಮಂದಿರವೊಂದರ ಬಳಿ ನಡೆದಿದೆ.

ಇಬ್ಬರು ಸಿಬ್ಬಂದಿಗಳ ಜೊತೆಗೂಡಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಕಿಡಿಗೇಡಿಯೋರ್ವನು ಗಣೇಶ್ ಅವರ ಮೇಲೆ ತಲವಾರಿನಿಂದ ದಾಳಿ ನಡೆಸಿದ್ದು ಪರಿಣಾಮ ತೀವ್ರ ತರಹದ ಗಾಯಗಳಾಗಿವೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಿಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

- Advertisement -

ಬಂದರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹಲ್ಲೆಗೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ.

- Advertisement -