ಮಂಗಳೂರಿನ ಖ್ಯಾತ ಶಸ್ತ್ರ ಚಿಕಿತ್ಸಕ ಡಾ. ದೇವದಾಸ್ ಹೆಗ್ಡೆ ನಿಧನ

Prasthutha|

ಮಂಗಳೂರಿನ ಖ್ಯಾತ ಹಿರಿಯ ವೈದ್ಯ ಡಾ. ದೇವದಾಸ್ ಹೆಗ್ಡೆ (79) ತನ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ದೇವದಾಸ್ ಹೆಗ್ಡೆಯವರು ನಗರದ ಮುಂಚೂಣಿಯ ಸರ್ಜನ್ ಆಗಿ ಗುರುತಿಸಲ್ಪಟ್ಟಿದ್ದರು. ಲೈಟ್ ಹೌಸ್ ಹಿಲ್ ರಸ್ತೆಯ ಬಾವುಟಗುಡ್ಡೆಯ ಈದ್ಗಾ ಮಸೀದಿ ಮುಂಭಾಗದಲ್ಲಿರುವ ಹೆಗ್ಡೆಯವರ ಕ್ಲಿನಿಕ್ ಮಂಗಳೂರಿಗರಿಗೆ ಚಿರಪರಿಚಿತವಾಗಿತ್ತು.

- Advertisement -

ತನ್ನ ಈ ಇಳಿ ವಯಸ್ಸಿನಲ್ಲೂ ವೃತ್ತಿಯಿಂದ ವಿಮುಖರಾಗದೆ ರೋಗಿಗಳಿಗೆ ಬೇಕಾಗಿ ಸೇವಾನಿರತರಾಗಿದ್ದರು. ಹೆಗ್ಡೆಯವರ ಅಕಾಲಿಕ ಮರಣವು ಹಲವಾರು ರೋಗಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿದೆ

- Advertisement -