ಭ್ರಷ್ಟಾಚಾರ ಪ್ರಕರಣ: ಪೊಲೀಸ್ ಅಧಿಕಾರಿಗೆ 4 ವರ್ಷ ಜೈಲು

Prasthutha|

ಕಲಬುರಗಿ: 2015ರ ಲಂಚ ಪ್ರಕರಣಕ್ಕೆ ಸಂಬಂಧಿಸಿ, ಕಲಬುರಗಿ ಜಿಲ್ಲೆಯ ಶಹಾಬಾದ್ ಠಾಣೆಯ ಪೊಲೀಸ್ ಅಧಿಕಾರಿ ವಿಜಯಲಕ್ಷ್ಮಿ ಮಸಾರೆ ಅವರಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ ಐದು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ವಿಜಯಲಕ್ಷ್ಮಿ ಅವರು 2015ರಲ್ಲಿ, ಜಪ್ತಿ ಮಾಡಿದ್ದ ವಾಹನ ಬಿಡುಗಡೆಗೆ 25 ಸಾವಿರ ರೂ. ಬೇಡಿಕೆ ಇಟ್ಟಿದ್ದರು. ವಾಹನ ಮಾಲಿಕರು

- Advertisement -

ಈ ಕುರಿತು ಕಲಬುರಗಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ವಿಜಯಲಕ್ಷ್ಮಿ ಲಂಚದ ಹಣ ಸ್ವೀಕರಿಸುತ್ತಿದ್ದಂತೆ ದಾಳಿ ನಡೆಸಿದ ಕಲಬುರಗಿ ಲೋಕಾಯುಕ್ತ ಪೊಲೀಸರು ಹಣ ಸಮೇತ ಅವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದರು.

ಇದೀಗ ವಿಜಯಲಕ್ಷ್ಮಿ ಅವರಿಗೆ ಲಂಚ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿದೆ. ಪ್ರಸ್ತುತ ನಾಗರಿಕ ಹಕ್ಕು ಜಾರಿ(ಸಿ.ಆರ್.ಇ) ಘಟಕದಲ್ಲಿ ಡಿ.ವೈ.ಎಸ್.ಪಿ ಆಗಿ ಅವರು ಕಾರ್ಯನಿರ್ವಹಿಸುತ್ತಿದ್ದರು.

- Advertisement -