ಭೀಮಾ ಕೋರೆಗಾಂವ್ ಗಲಭೆ: ಎನ್.ಐ.ಎ ಚಾರ್ಜ್ ಶೀಟ್ ನಲ್ಲಿ ಮಾನವ ಹಕ್ಕು ಹೋರಾಟಗಾರರು

Prasthutha|

ಹೊಸದಿಲ್ಲಿ: 2018ರಲ್ಲಿ ಮಹಾರಾಷ್ಟ್ರದ ಭೀಮಾ ಕೋರೆಗಾಂವ್ ಜಿಲ್ಲೆಯಲ್ಲಿ ನಡೆದ ಹಿಂಸೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ)ವು ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ  ಖ್ಯಾತ ಮಾನವ ಹಕ್ಕು ಹೋರಾಟಗಾರ ಆನಂದ್ ತೇಲ್ತುಂಬ್ಡೆ, ಗೌತಮ್ ನವಲಖ ಮತ್ತು ದಿಲ್ಲಿ ಯುನಿವರ್ಸಿಟಿಯ ಸಹ ಪ್ರಾಧ್ಯಾಪಕ ಹನಿ ಬಾಬುರ ಹೆಸರುಗಳನ್ನು ಸೇರಿಸಲಾಗಿದೆ.  

2017ರ ಡಿಸೆಂಬರ್ 31ರಂದು ಪುಣೆಯಲ್ಲಿ ನಡೆದ ಹಿಂಸಾಚಾರದಲ್ಲಿ ಓರ್ವ ಸಾವನ್ನಪ್ಪಿದ್ದ. ಎ.ಎನ್.ಐ ವರದಿಯ ಪ್ರಕಾರ, ಮಾನವ ಹಕ್ಕು ಹೋರಾಟಗಾರರಾದ ಸಾಗರ್ ಗೋರ್ಖೆ, ರಮೇಶ್ ಗಾಯ್ಕರ್, ಜ್ಯೋತಿ ಜಗ್ತಪ್, ಸ್ಟ್ಯಾನ್ ಸ್ವಾಮಿ ಮತ್ತು ಮಾವೊವಾದಿ ನಾಯಕ ಮಿಲಿಂದ್ ತೇಲ್ ತುಂಬ್ಡೆ ಹೆಸರುಗಳನ್ನು ಎನ್.ಐ.ಎ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಹೆಸರಿಸಲಾಗಿದೆ.

- Advertisement -

ಭೀಮ ಕೋರೆಗಾಂವ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಡ ಬುದ್ಧಿಜೀವಿಗಳ ಬಂಧನವು ಸರಕಾರದ ವಿರುದ್ಧ ಟೀಕೆಗೆ ಕಾರಣವಾಗಿತ್ತು. ಸರಕಾರವು ಭಿನ್ನಮತವನ್ನು ದಮನಿಸುವುದಕ್ಕಾಗಿ ಈ ರೀತಿಯ ಬಂಧನಗಳನ್ನು ನಡೆಸುತ್ತಿದೆ ಎಂದು ಹೇಳಲಾಗಿತ್ತು.

ಎಲ್ಗರ್ ಪರಿಷತ್ ಸಭೆಯಲ್ಲಿ ಹೋರಾಟಗಾರರು ಪ್ರಚೋದನಕಾರಿ ಉದ್ವಿಗ್ನ ಭಾಷಣಗಳನ್ನು ಮಾಡಿದ ಕಾರಣ ಮರುದಿನ ಈ ಹಿಂಸೆ ಭುಗಿಲೆದ್ದಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದರು.

- Advertisement -