ಭಾರತೀಯ ವಲಸಿಗರಿಗೆ ಪಾಸ್ ಪೋರ್ಟ್ ನಲ್ಲಿ ಯುಎಇಯ ಸ್ಥಳೀಯ ವಿಳಾಸ ನಮೂದಿಸುವ ಅವಕಾಶ

Prasthutha|

ದುಬೈ : ಯುಎಇ ಅಥವಾ ಇತರ ದೇಶಗಳಲ್ಲಿ ನೆಲೆಸಿರುವ ಭಾರತೀಯ ವಲಸಿಗರಿಗೆ ಇನ್ನು ತಾವು ನೆಲೆಸಿರುವ ದೇಶದಲ್ಲಿನ ವಿಳಾಸವನ್ನು ತಮ್ಮ ಪಾಸ್ ಪೋರ್ಟ್ ನಲ್ಲಿ ನಮೂದಿಸಲು ಅವಕಾಶವಿದೆ ಎಂದು ಮೂಲಗಳು ತಿಳಿಸಿವೆ. ದುಬೈಯಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿ ಸಿದ್ಧಾರ್ಥ ಕುಮಾರ್ ಬರೇಲಿ ಈ ಕುರಿತು ಮಾಹಿತಿ ನೀಡಿದ್ದಾರೆ.

ಅನಿವಾಸಿ ಭಾರತೀಯರು, ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ಸ್ಥಳೀಯ ಶಾಶ್ವತ ವಿಳಾಸ ಇಲ್ಲದವರಿಗೆ ತಾವು ಇರುವ ದೇಶದಲ್ಲಿನ ವಿಳಾಸವನ್ನು ಪಾಸ್ ಪೋರ್ಟ್ ನಲ್ಲಿ ದಾಖಲಿಸುವ ಅವಕಾಶ ನೀಡಲಾಗಿದೆ.

- Advertisement -

“ದೀರ್ಘ ಕಾಲದಿಂದ ಯುಎಇಯಲ್ಲಿ ನೆಲೆಸಿರುವ ಹಲವಾರು ಮಂದಿಗೆ ಭಾರತದಲ್ಲಿ ಅಧಿಕೃತ ವಿಳಾಸವಿಲ್ಲ ಎಂಬುದು ನಮಗೆ ಗೊತ್ತಿದೆ. ಅಂತಹವರು ತಮ್ಮ ಯುಎಇಯ ಸ್ಥಳೀಯ ವಿಳಾಸವನ್ನು ತಮ್ಮ ಪಾಸ್ ಪೋರ್ಟ್ ಗಳಲ್ಲಿ ನಮೂದಿಸಬಹುದು’’ ಎಂದು ಸಿದ್ಧಾರ್ಥ ಹೇಳಿದ್ದಾರೆ.

ಪ್ರಸ್ತುತ ಪಾಸ್ ಪೋರ್ಟ್ ನಲ್ಲಿ ವಿಳಾಸ ಬದಲಾವಣೆ ಸಾಧ್ಯವಿಲ್ಲ. ವಿಳಾಸ ಬದಲಾಯಿಸಬೇಕೆಂದು ಇರುವವರು ಹೊಸ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಬಹುದು. ಯುಎಇಯ ವಿಳಾಸವನ್ನು ದೃಢಪಡಿಸಲು ವಿದ್ಯುತ್ ಬಿಲ್, ನೀರಿನ ಬಿಲ್, ಬಾಡಿಗೆ ಒಪ್ಪಂದ ಮುಂತಾದ ಯಾವುದೇ ಅಧಿಕೃತ ದಾಖಲೆಯನ್ನು ಸಲ್ಲಿಸಬಹುದು.  

- Advertisement -