ಭಾರತವನ್ನು ಮುಳುಗಿಸಲಿದೆ ಮೋದಿ ಪಡೆ, ಎಚ್ಚರ!

0
351

ಡಾ.ಬಿ.ಪಿ.ಮಹೇಶಚಂದ್ರ ಗುರು, ಪ್ರಾಧ್ಯಾಪಕರು, ಮೈಸೂರು ವಿವಿ

ಭಾರತೀಯ ಸಂವಿಧಾನ, ಪ್ರಜಾಸತ್ತೆ ಮತ್ತು ನಾಗರಿಕ ಸಮಾಜಗಳ ರಕ್ಷಣೆಗಾಗಿ ಸೆಪ್ಟೆಂಬರ್ 10ರಂದು ಜರುಗಿದ ಭಾರತ್ ಬಂದ್ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿದೆ. ಪ್ರಜಾಪ್ರಭುತ್ವವು ಜಗತ್ತಿನಲ್ಲಿ ಹೊಸ ಜೀವನ ವಿಧಾನವಾಗಿ ಪ್ರಜೆಗಳ ಸಾರ್ವಭೌಮತ್ವವನ್ನು ರಕ್ಷಿಸುವ ನಿಟ್ಟಿನಲ್ಲಿ ವಿಶ್ವದೆಲ್ಲೆಡೆ ಉಪಯುಕ್ತವಾಗಿದೆ. ಶ್ರೇಷ್ಠ ಇತಿಹಾಸಕಾರ ಅರ್ನಾಲ್ಡ್ ಟೋಯ್ನ್ನ್‌ಬಿ ಬೆದರಿಕೆಯೆಂಬುದು ಮಾನವ ಇತಿಹಾಸದಲ್ಲಿ ಹೊಸದೇನಲ್ಲ. ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸಿ ನಿಂತ ಸಮಾಜ ಮತ್ತು ಸಂಸ್ಕೃತಿ ಅತಿಜಯಿಸಿದೆ. ಎದುರಿಸುವಲ್ಲಿ ವಿಫಲವಾದ ಸಮಾಜ ನಾಮಾವಶೇಷವಾಗಿದೆ. ಅಂತಹ ಬೆದರಿಕೆಗಳನ್ನು ಯಶಸ್ವಿಯಾಗಿ ಎದುರಿಸುವುದರ ಹಿಂದಿರುವುದು ಆ ಸಮಾಜದ ಸಜನಶೀಲರಾದ ಪ್ರಬುದ್ಧ ವ್ಯಕ್ತಿಗಳಾಗಿರುತ್ತಾರೆ. ಅವರು ತಮ್ಮ ಸಹಜೀವಿಗಳನ್ನು ಸುರಕ್ಷಿತವಾಗಿ ಪ್ರಗತಿಯತ್ತ ಮುನ್ನಡೆಸಿದ್ದಾರೆ ಎಂದು ಹೇಳಿರುವುದು ಭಾರತದಲ್ಲಿ ಇಂದು ಸಮಕಾಲೀನ ಮಹತ್ವ ಹೊಂದಿದೆ.

ಜಗತ್ತಿನ ಎಲ್ಲ ಧರ್ಮಗಳೂ ಒಳ್ಳೆಯದನ್ನೇ ಬಯಸು-ಒಳ್ಳೆಯದನ್ನೇ ಮಾಡು ಎಂದು ಬೋಧಿಸುತ್ತವೆ. ಯುದ್ಧ ಮತ್ತು ವಿನಾಶದೆಡೆಗೆ ಸಾಗುತ್ತಿರುವ ಜಗತ್ತನ್ನು ಪಾರು ಮಾಡುವಲ್ಲಿ ಇಂದು ಸಂಕಷ್ಟ ಅನುಭವಿಸುವವರ ವಿಮೋಚನೆಗಾಗಿ ಸಕ್ರಿಯರಾದ ಪ್ರಜ್ಞಾವಂತರು ಮತ್ತು ಮಾನವೀಯತೆಗೆ ಬದ್ಧರಾದ ಒಂದು ಪಡೆ ಕಾರ್ಯಶೀಲರಾಗಬೇಕೆಂಬುದು ಕುರ್‌ಆನ್‌ನ ಕರೆಯೂ ಆಗಿದೆ. ಬುದ್ಧ, ಬಸವ, ಸೂಫಿ ಸಂತರು ಮತ್ತು ಎಲ್ಲ ಮಾನವತಾವಾದಿಗಳು ‘ನಿಮ್ಮ ಸ್ವಾರ್ಥವನ್ನು ಕೊಂದು ಸಮಾಜವನ್ನು ಉಳಿಸಿ ಮತ್ತು ಬೆಳೆಸಿ’ ಎಂಬ ಸಂದೇಶವನ್ನು ನೀಡಿದ್ದಾರೆ. ಸತ್ತ ಮೇಲೆ ದೇವರು ಮತ್ತು ಪ್ರಕತಿಯ ಮಡಿಲಲ್ಲಿ ಒಂದಾಗುವ ಮನುಷ್ಯರು ಬದುಕಿರುವಾಗಲೂ ಕೂಡ ಕೂಡಿ ಬಾಳಿದರೆ ಶ್ರೇಷ್ಠ ಸಂಸ್ಕೃತಿ ಮತ್ತು ನಾಗರಿಕತೆಗಳು ರೂಪುಗೊಳ್ಳುತ್ತವೆ. ಅಲ್ಲಮಪ್ರಭುವಿನ ‘ನಾನು ನಾನಲ್ಲ, ದೇವರು-ಪ್ರಕತಿಯೇ ಎಲ್ಲ’ ಎಂಬ ಮಾತುಗಳು ಇಂದು ನಮ್ಮನ್ನು ಆಳುತ್ತಿರುವವರಿಗೆ ಸರಿಯಾಗಿ ಅರ್ಥವಾದರೆ ಸ್ವಾರ್ಥಪರತೆ, ಮೂಲಭೂತವಾದ, ಭ್ರಷ್ಟಾಚಾರ, ಬೆದರಿಕೆ ಮೊದಲಾದ ಅನಿಷ್ಟಗಳನ್ನು ಮೀರಿ ಮಾನವೀಯತೆಯೆಡೆಗೆ ಜಗತ್ತನ್ನು ಮುನ್ನಡೆಸಲು ಸಾಧ್ಯವಾಗುತ್ತದೆ.

ಭಾರತೀಯ ಸಂಸ್ಕೃತಿ ಹಲವಾರು ಸಂಕೀರ್ಣತೆಗಳು ಮತ್ತು ಸವಾಲುಗಳ ನಡುವೆಯೂ ತನ್ನ ನೈಜತೆ ಮತ್ತು ಶ್ರೇಷ್ಠತೆಗಳನ್ನು ಉಳಿಸಿಕೊಂಡು ಹೋಗಲು ಬುದ್ಧ, ಮಹಾವೀರ, ಬಸವ, ಪುಲೆ, ರಾಮಾನುಜ, ಕಬೀರ, ದಯಾನಂದ ಸರಸ್ವತಿ, ರಾಜಾರಾಮ ಮೋಹನ್ ರಾಯ್, ಈಶ್ವರ ಚಂದ್ರ ವಿದ್ಯಾಸಾಗರ್, ಲಾಲಾ ಲಜಪತರಾಯ್, ಬಿಪಿನ್ ಚಂದ್ರಪಾಲ್, ಬಾಲಗಂಗಾಧರ ತಿಲಕ್, ಮೋತಿಲಾಲ್ ನೆಹರು, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ಪಂಡಿತ್ ನೆಹರು, ಅಂಬೇಡ್ಕರ್, ಪೆರಿಯಾರ್, ಲೋಹಿಯಾ, ರಾಜರ್ಷಿ ನಾಲ್ವಡಿ ಕಷ್ಣರಾಜ ಒಡೆಯರ್, ಶಿಕ್ಷಣ ಸಂತ ಕುವೆಂಪು ಮೊದಲಾದ ಮಹನೀಯರು ನಡೆಸಿದ ಸಾಮಾಜಿಕ ಸುಧಾರಣೆ ಕಾರ್ಯಗಳು ಪ್ರಮುಖ ಕಾರಣವಾಗಿವೆ. ಇಂತಹ ಮಹಾ ಸಂತರು ಮತ್ತು ಸಾಧಕರು ಕಟ್ಟಿ ಬೆಳೆಸಿರುವ ಭಾರತೀಯ ಸಂಸ್ಕೃತಿಯನ್ನು ನಾಶಪಡಿಸಿ ಅರಾಜಕತೆ ಸಷ್ಟಿ ಮಾಡುವ ಕೆಲಸವನ್ನು ಜಾಗತಿಕವಾಗಿ ಮಾರುಕಟ್ಟೆ ಶಕ್ತಿಗಳು ಮತ್ತು ಸ್ಥಳೀಯವಾಗಿ ಹಿಂದುತ್ವವಾದಿಗಳು ನಡೆಸುತ್ತಿರುವುದನ್ನು ಪ್ರಜ್ಞಾವಂತರು ತಡೆಯಲೇ ಬೇಕಿದೆ. ಮೊನ್ನೆ ನಡೆದ ಭಾರತ್ ಬಂದ್ ಕೇವಲ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಲಷ್ಟೇ ಸೀಮಿತಗೊಂಡಿಲ್ಲ. ಇದು ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆಗೆ ಬದ್ಧವಾದ ವಿಶಾಲ ಕಾರ್ಯಸೂಚಿಯನ್ನು ಆಧರಿಸಿದೆ.

ಡಾ.ಮನಮೋಹನ್ ಸಿಂಗ್ ನೇತತ್ವದ ಯುಪಿಎ-2 ಸರಕಾರ ಕಾಂಗ್ರೆಸ್ ಪಕ್ಷದೊಳಗಿನ ಕುಟುಂಬ ರಾಜಕಾರಣ ಮತ್ತು ಪಟ್ಟಭದ್ರ ಹಿತಾಸಕ್ತಿಗಳ ಸ್ವಾರ್ಥಪರತೆಯಿಂದಾಗಿ ಉತ್ತಮ ಆಡಳಿತ ಮತ್ತು ಅಭಿವದ್ಧಿ ನೀಡಲು ವಿಫಲವಾಯಿತು. ದೇಶದ ಜನರಿಗೆ ಬದಲಾವಣೆ ಅನಿವಾರ್ಯವಾಗಿತ್ತು. ಕುರುಡುಗಣ್ಣಿನವನಿಗಿಂತ ಮೆಳ್ಳಗಣ್ಣಿನವನು (ಸುಮಾರಾಗಿ ನೋಡುವವನು) ಎಷ್ಟೋ ವಾಸಿಯೆಂಬ ಅರಿವಿಗೆ ಜನರು ಶರಣಾಗಿದ್ದರು. ಇಂತಹ ಮೆಳ್ಳಗಣ್ಣಿನವರ ನಾಯಕನಾಗಿ ನರೇಂದ್ರ ಮೋದಿ 2014ರಲ್ಲಿ ಹಲವಾರು ಹುಸಿ ಭರವಸೆಗಳನ್ನು ಜನರಿಗೆ ನೀಡಿ ಅಧಿಕಾರ ಚುಕ್ಕಾಣಿಯನ್ನು ಹಿಡಿದರು. ಮೋದಿಯವರು ಅಧಿಕಾರಕ್ಕೆ ಬರುವ ಮುನ್ನ ದೇಶಕ್ಕೆ ಒಳ್ಳೆಯ ದಿನಗಳು ಬರಲಿವೆ ಅನ್ನುತ್ತಿದ್ದರು. ಆದರೆ, ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷಗಳಾದರೂ ಒಳ್ಳೆಯ ದಿನಗಳು ಬರಲಿಲ್ಲ. ಬದಲಾಗಿ ದೇಶದ ಜನ ಮತ್ತಷ್ಟು ಸಂಕಷ್ಟಗಳಿಗೆ ಸಿಲುಕಿ ಒದ್ದಾಡುತ್ತಿದ್ದಾರೆ ಎಂಬ ಪ್ರೊ.ಕೆ.ಎಸ್.ಭಗವಾನ್‌ರವರ ಮಾತುಗಳು ಅರ್ಥಪೂರ್ಣವಾಗಿದೆ. ಪ್ರಕತಿ ರಕ್ಷಣೆ, ಮಾನವ ಹಕ್ಕುಗಳ ರಕ್ಷಣೆ, ಮಾನವ ಅಭಿವದ್ಧಿ ಸಾಧನೆ, ಸಾಮಾಜಿಕ ನ್ಯಾಯ ವಿತರಣೆ, ಆರ್ಥಿಕ ಸಮಾನತೆ, ಸಾಮಾಜಿಕ ಸುರಕ್ಷತೆ ಮೊದಲಾದ ವಿಷಯಗಳಲ್ಲಿ ಮೋದಿ ಸರಕಾರ ಸಂಪೂರ್ಣ ವಿಫಲಗೊಂಡಿದೆ. ‘ಸಬ್‌ಕಾ ಸಾಥ್ – ಸಬ್‌ಕಾ ವಿಕಾಸ್’ ಎಂದು ಬಾಯಲ್ಲಿ ಹೇಳಿ ವಾಸ್ತವವಾಗಿ ‘ಅಮೀರ್ ಕಾ ಸಾಥ್ – ಅಮೀರ್ ಕಾ ವಿಕಾಸ್’ (ಶ್ರೀಮಂತರ ಜೊತೆ – ಶ್ರೀಮಂತರ ಉದ್ಧಾರ) ಮಾಡಿರುವ ಮೋದಿಯವರ ವಿಶ್ವಾಸದ್ರೋಹವನ್ನು ಭಾರತೀಯರು ಕ್ಷಮಿಸಬಾರದು.

ಅಂದು ಪಂಡಿತ್ ಜವಾಹರಲಾಲ್ ನೆಹರು ಸಾರ್ವಜನಿಕ ಸಂಸ್ಥೆಗಳನ್ನು ಅಭಿವದ್ಧಿಪಡಿಸುವ ಮೂಲಕ ಭೂಮಿ, ಬಂಡವಾಳ, ಉದ್ಯೋಗ, ಲಾಭ ಎಲ್ಲವೂ ದೇಶದ ಸ್ವತ್ತಾಗಿ ಉಳಿಯುವಂತೆ ನೋಡಿಕೊಂಡಿದ್ದರು. ಇಂದು ಮೋದಿಜಿ ಖಾಸಗೀಕರಣವನ್ನು ಉತ್ತೇಜಿಸಿ ಶ್ರೀಮಂತರು ಮಾತ್ರ ಪ್ರಕಾಶಿಸುವಂತೆ ನೋಡಿಕೊಂಡರು. ಕೋಟ್ಯಂತರ ವಿದ್ಯಾವಂತ ಯುವಜನರು ಆತ್ಮಹತ್ಯೆಯೆಡೆಗೆ ಮುಖ ಮಾಡುವಂತಹ ದುಸ್ಥಿತಿಯನ್ನು ಇವರು ಸಷ್ಟಿಸಿದರು. ನೆಹರೂರವರ ಮಗಳು ಇಂದಿರಾಜಿ ಬ್ಯಾಂಕುಗಳ ರಾಷ್ಟ್ರೀಕರಣ, ಭೂಸುಧಾರಣೆ, 20 ಅಂಶಗಳ ಕಾರ್ಯಕ್ರಮ, ಕನಿಷ್ಟ ಅಗತ್ಯಗಳ ಪೂರೈಕೆ, ಮೂಲಭೂತ ಸೌಕರ್ಯಗಳ ಅಭಿವದ್ಧಿ ಮೊದಲಾದವುಗಳ ಮೂಲಕ ದೇಶದ ಜನರಿಗೆ ಒಳ್ಳೆಯದನ್ನು ಮಾಡಿ ‘ಗರೀಬಿ ಹಟಾವೋ’ (ಬಡತನ ನಿರ್ಮೂಲನೆ) ದಿಕ್ಕಿನಲ್ಲಿ ದಿಟ್ಟತನದಿಂದ ಸಾಗಿದರೆ ಮೋದಿಜಿ ಖಾಸಗೀಕರಣದ ಮೂಲಕ ಮೀಸಲಾತಿ ಮತ್ತು ಉದ್ಯೋಗ ಸೌಲಭ್ಯಗಳನ್ನು ಕಿತ್ತುಕೊಂಡು ‘ಗರೀಬೋಂಕೊ ಹಟಾವೋ’ (ಬಡವರ ನಿರ್ಮೂಲನೆ) ಮಾಡುತ್ತಿರುವುದು ಸರಿಯಲ್ಲ.

ಹೆಸರಾಂತ ಇತಿಹಾಸಕಾರರಾದ ರೊಮಿಲಾ ಥಾಪರ್ ‘‘ಒಂದು ದೇಶದ ಅಭಿವದ್ಧಿ ಪ್ರಧಾನಿಯಾದವರ ವಿಶಾಲ ಎದೆ ಅಳತೆಯನ್ನು ಅವಲಂಬಿಸಿಲ್ಲ, ವಿಶಾಲ ಹದಯ ಮತ್ತು ಸಮಷ್ಟಿ ಪ್ರಜ್ಞೆಗಳನ್ನು ಆಧರಿಸಿದ ದೇಶ ಸೇವೆಯನ್ನು ಅವಲಂಬಿಸಿದೆ’’ ಎಂದು ಹೇಳಿರುವ ಮಾತುಗಳು ಮೋದಿಯವರಿಗೆ ಆತ್ಮಾವಲೋಕನಕ್ಕೆ ಎಡೆಮಾಡಿಕೊಡಬೇಕು. ‘‘ನೂರು ವರ್ಷ ನರಿಯಂತೆ ಬದುಕಿ ದೇಶಕ್ಕೆ ದ್ರೋಹ ಬಗೆದು ಇತಿಹಾಸದ ಕಸದ ಬುಟ್ಟಿ ಸೇರುವ ಬದಲು ಒಂದು ವರ್ಷ ಸಿಂಹದಂತೆ ಬದುಕಿ ದೇಶದ ಸಾರ್ವಭೌಮತ್ವಕ್ಕಾಗಿ ಪ್ರಾಣ ತ್ಯಾಗಮಾಡುವುದು ಶ್ರೇಷ್ಠ’’ ಎಂದು ನುಡಿದ ಮಹಾ ದೇಶ ಕ್ತ ಹಾಗೂ ಹುತಾತ್ಮ ಟಿಪ್ಪು ಸುಲ್ತಾನ್ ಅವರ ಮಾತುಗಳು ಇಂದು ಮೋದಿಯವರಿಗೆ ವಿಶೇಷವಾಗಿ ಅರ್ಥವಾಗಬೇಕಿದೆ. ಇತ್ತೀಚೆಗೆ ಪುಂಡ ಸಂಸದನೊಬ್ಬ ‘‘ಮೋದಿಯವರಿಗೆ 58 ಇಂಚು ಎದೆಯೂ ಇದೆ, ಎದೆಗಾರಿಕೆಯೂ ಇದೆ’’ ಎಂದು ಹೇಳಿ ತನಗಿಂತ ಕಿರಿಯ ಚಮಚ ಮತ್ತೊಬ್ಬನಿಲ್ಲ ಎಂದು ಸಾಬೀತುಪಡಿಸಿದ್ದಾನೆ.

ದೇಶದ ಜನರನ್ನು ಅವನತಿಯೆಡೆಗೆ ಕೊಂಡೊಯ್ಯುತ್ತಿರುವ ರಾಷ್ಟ್ರೀಯ ವಿದ್ವಂಸಕರ ಕೂಟ ಮೋದಿ ನೇತತ್ವದಲ್ಲಿ ಇಂದು ವಿಜಂಭಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಸಂವಿಧಾನದ ಹೆಸರಿನಲ್ಲಿ ಮಂತ್ರಿಯಾದ ಮತ್ತೊಬ್ಬ ಹುಂಬ ‘‘ಸಂವಿಧಾನವನ್ನು ಬದಲಿಸಲೆಂದೇ ನಾವು ಅಧಿಕಾರಕ್ಕೆ ಬಂದಿದ್ದೇವೆ’’ ಎಂದು ಹೇಳಿ ಜನರಿಂದ ಉಗಿಸಿಕೊಂಡಿರುವ ಸಂಗತಿ ಇನ್ನೂ ನೆನಪಿನಲ್ಲಿದೆ. ‘‘ಗೋಡ್ಸೆಗಿಂತ ಮೊದಲೇ ಹುಟ್ಟಿದ್ದರೆ ನಾನೇ ಗಾಂಧಿಯನ್ನು ಕೊಲ್ಲುತ್ತಿದ್ದೆ’’ ಎಂದು ಇನ್ನೊಬ್ಬ ಹಿಂದುತ್ವವಾದಿ ಪುಂಡ ಹೆಂಗಸು ಹೇಳಿರುವುದನ್ನು ಖಂಡಿಸಿ ಜೈಲಿಗೆ ಹಾಕುವುದರ ಬದಲು ಮೋದಿ ಮತ್ತು ಬಳಗ ಮೌನವಾಗಿ ರಕ್ಷಿಸುತ್ತಿರುವುದು ದೇಶದ್ರೋಹಿಗಳ ಪಡೆ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಮ್ಮನ್ನು ವಿನಾಶದೆಡೆಗೆ ಕೊಂಡೊಯ್ಯುತ್ತಿರುವ ಸಂಕೇತವಾಗಿದೆ.

ಮೊನ್ನೆ ನಡೆದ ಭಾರತ್ ಬಂದ್ ಸರಕಾರಿ ಪ್ರಾಯೋಜಿತ ಬಂದ್ ಎಂದು ಹೇಳಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತತ್ವದ ನಿಯೋಗ ಪ್ರಧಾನಿ ಭೇಟಿ ಮಾಡಿ ಕೊಡಗಿನ ನೊಂದವರಿಗೆ ಆರ್ಥಿಕ ನೆರವು ಕೇಳಲು ಹೋದಾಗ ಬೇಕಂತಲೇ ತಪ್ಪಿಸಿಕೊಂಡ ಈ ಭಾಗದ ಸಂಸದನಿಗೆ ಹದಯವಂತಿಕೆಯೂ ಇಲ್ಲ, ಎದೆಗಾರಿಕೆ ಇಲ್ಲವೇ ಇಲ್ಲ ಎಂಬ ಸತ್ಯ ನಮಗೆ ಮನವರಿಕೆಯಾಗಿದೆ. ಈತನಿಗೆ ಮುಂದಿನ ಮಹಾಚುನಾವಣೆಯಲ್ಲಿ ಮತದಾರ ಬಂಧುಗಳು ಗೇಟ್ ಪಾಸ್ ನೀಡುವುದು ಅನಿವಾರ್ಯವಾಗಿದೆ.‘‘ಕೋಮುವಾದಿ ಬಿಜೆಪಿಯಿಂದ ದೇಶವನ್ನು ರಕ್ಷಿಸಬೇಕು’’ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್‌ದೊರೆಸ್ವಾಮಿ ಹೇಳಿರುವ ಮಾತುಗಳು ಇಂದು ಪ್ರಗತಿಪರರು ಮತ್ತು ಜಾತ್ಯತೀತರಿಗೆ ಅರ್ಥವಾಗಬೇಕಿದೆ. ತುರ್ತು ಪರಿಸ್ಥಿತಿ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ರಾಜನೀತಿಯನ್ನು ಉಗ್ರವಾಗಿ ವಿರೋಧಿಸಿದ ಶೋಷಿತರ ಧ್ವನಿ ದೇವನೂರು ಮಹಾದೇವ ‘‘ನಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಕಾಂಗ್ರೆಸ್, ಪ್ರಾದೇಶಿಕ ಪಕ್ಷಗಳು, ಕಮ್ಯುನಿಷ್ಟ್‌ರು,ರೈತ ಸಂಘಟನೆಗಳು, ದಲಿತ ಸಂಘಟನೆಗಳು ಮೊದಲಾದ ಬಿಜೆಪಿಯೇತರ ಬಣಗಳನ್ನು ಬೆಂಬಲಿಸುವುದು ಬಹುಸಂಸ್ಕೃತಿ ಮತ್ತು ಬಹುಜನರ ರಕ್ಷಣೆಗೆ ಅನಿವಾರ್ಯ’’ ಎಂದು ಹೇಳಿರುವ ಮಾತುಗಳನ್ನು ನಾವು ಒಪ್ಪಲೇಬೇಕು.

ಇತ್ತೀಚೆಗೆ ಮೋದಿ ಬಳಗ ನಯಿ ಭಾರತ್ (ಹೊಸ ಭಾರತ) ನಿರ್ಮಿಸುವುದು ನಮ್ಮ ಗುರಿ ಎಂದು ಹೇಳುತ್ತಿದೆ. ಪ್ರಕತಿ ಮತ್ತು ಮಾನವೀಯತೆಗಳನ್ನು ನಿರ್ಲಕ್ಷಿಸಿದ ಫಲವಾಗಿ ಕೊಡಗು, ಕೇರಳ, ಉತ್ತರ ಬಾರತ, ಈಶಾನ್ಯ ಭಾರತ ಮೊದಲಾದೆಡೆ ಪ್ರವಾಹ ಉಂಟಾಗಿ ಭಾರತವೇ ಮುಳುಗುವ ಸ್ಥಿತಿ ನಿರ್ಮಾಣವಾಗಿದೆ. ಮೋದಿ ಬಳಗ ತನ್ನ ಸಂವಿಧಾನ ವಿರೋಧಿ, ಪ್ರಜಾಸತ್ತೆ ವಿರೋಧಿ, ಮಾನವ ವಿರೋಧಿ, ಪ್ರಕತಿ ವಿರೋಧಿ ಹಾಗೂ ಸಾಮಾಜಿಕ ನ್ಯಾಯ ವಿರೋಧಿ ಧೋರಣೆಗಳು ಮತ್ತು ನಡವಳಿಕೆಗಳಿಂದ ‘ನೋ ಭಾರತ್’ ದಿಕ್ಕಿನತ್ತ ದೇಶವನ್ನು ಕೊಂಡೊಯ್ಯುತ್ತಿದೆ. ಅಂದು ಗಾಂಧಿ ಬ್ರಿಟಿಷರನ್ನು ದೇಶದಿಂದ ತೊಲಗಿಸಲು ‘ಕ್ವಿಟ್ ಇಂಡಿಯಾ ಚಳುವಳಿ’ಯನ್ನು 1942ರಲ್ಲಿ ನಡೆಸಿದ ರೀತಿಯಲ್ಲೇ 2019ರಲ್ಲಿ ‘ಕ್ವಿಟ್ ಎನ್‌ಡಿಎ’ ಚಳುವಳಿಯನ್ನು ನಡೆಸಿ ಭಾರತ ಮುಳುಗುವುದನ್ನು ತಪ್ಪಿಸಬೇಕಾದ ಸಾಮಾಜಿಕ ಜವಾಬ್ದಾರಿಯನ್ನು ಪ್ರಗತಿಪರರು, ಜಾತ್ಯತೀತರು, ಮಾನವತಾವಾದಿಗಳು ಮತ್ತು ಪ್ರಜಾಪ್ರಭುತ್ವವಾದಿಗಳು ನಿರ್ವಹಿಸಲೇಬೇಕಿದೆ. ಇದೊಂದು ಪ್ರಜ್ಞಾವಂತಿಕೆ ಮತ್ತು ಹದಯವಂತಿಕೆಗಳನ್ನು ಆಧರಿಸಿದ ರಾಜಕೀಯವಿಶ್ಲೇಷಣೆಯೇ ಹೊರತಾಗಿ ಬೇರೆನೂ ಅಲ್ಲವೆಂಬುದನ್ನು ಮೈಸೂರು ವಿವಿಯ ಇತಿಹಾಸ ಪ್ರಜ್ಞೆಯಿಲ್ಲದ ರಾಜಣ್ಣನ ನೇತತ್ವದ ಅವಿವೇಕಿ ಅಧಿಕಾರಿಗಳು ಅರಿಯಲೇಬೇಕು.ರಾಜ್ಯ ಸರಕಾರ ಪ್ರಶ್ನಿಸುವವರು ಮತ್ತು ಹೋರಾಟಗಾರರನ್ನು ರಕ್ಷಿಸಿದರೆ ಅಮಾನತು ಮಾಡುವುದೇ ನಮ್ಮ ಗಂಡಸುತನವೆಂದು ವಿವಿ ಅಧಿಕಾರಿಗಳು ತಪ್ಪಾಗಿ ತಿಳಿದಿದ್ದಾರೆ.

***

LEAVE A REPLY

Please enter your comment!
Please enter your name here