ಭಾರತದ ಪ್ರಜಾಪ್ರಭುತ್ವ ಪತನದತ್ತ ಸಾಗುತ್ತಿದೆ : ‘ವಿ-ಡೆಮ್’ ವರದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೇರಿದ ಬಳಿಕ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದೇಶದ್ರೋಹ, ಭಯೋತ್ಪಾದನೆ ಹೆಸರಲ್ಲಿ ದಾಳಿಗಳಾಗುತ್ತಿರುವುದು ಸಹಜ ಎಂಬಂತಾಗಿ ಬಿಟ್ಟಿದೆ. ಇದೀಗ, ‘ವಿ-ಡೆಮ್’ ಎಂಬ ಸಂಸ್ಥೆಯು ಬಿಡುಗಡೆಗೊಳಿಸಿರುವ ವರದಿಯ ಪ್ರಕಾರ ಇನ್ನೂ ಆತಂಕಕಾರಿಯೊಂದು ಅಂಶವೊಂದು ಬೆಳಕಿಗೆ ಬಂದಿದೆ. ಭಾರತ ಶೀಘ್ರದಲ್ಲೇ ತನ್ನ ಪ್ರಜಾಪ್ರಭುತ್ವ ಸ್ಥಾನಮಾನ ಕಳೆದುಕೊಳ್ಳಲಿದೆ ಎಂದು ಸ್ವೀಡನ್ ಮೂಲದ ‘ವಿ-ಡೆಮ್’ ಸಂಸ್ಥೆ ವರದಿ ಮಾಡಿದೆ.

ಗೊಟೆನ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುವ ‘ವಿ ಡೆಮ್’ ಸಂಸ್ಥೆ 2017ರಿಂದ ಪ್ರಜಾಪ್ರಭುತ್ವ ಕುರಿತ ಅಂಕಿ ಅಂಶಗಳನ್ನು ಹೊರತರುತ್ತಿದೆ.

- Advertisement -

“ಅಟೊಕ್ರಾಟೈಸೇಶನ್ ಸರ್ಜಸ್ – ರೆಸಿಸ್ಟೆನ್ಸ್ ಗ್ರೋಸ್’’ ಎಂಬ ತಲೆಬರಹದಡಿ ಬಿಡುಗಡೆಯಾದ ಮಾಹಿತಿ ಪುಸ್ತಕದಲ್ಲಿ 2020ರ ವರದಿ ಪ್ರಕಟಿಸಲಾಗಿದೆ. ಈ ವರದಿಯಲ್ಲಿ ಭಾರತದ ಕುರಿತು ಪ್ರಸ್ತಾಪಿಸುತ್ತಾ, ಭಾರತವು ಪ್ರಜಾಪ್ರಭುತ್ವ ದಿಕ್ಕಿನಲ್ಲಿ ತೀವ್ರ ಕುಸಿತ ಕಾಣುತ್ತಿದೆ, ಪ್ರಜಾಪ್ರಭುತ್ವ ಪತನದತ್ತ ಸಾಗುತ್ತಿದೆ ಎಂದಿದೆ.

2019ರಲ್ಲಿ ಎಕಾನಮಿಸ್ಟ್ ಗ್ರೂಪ್ ಹೊರತಂದ ‘ಪ್ರಜಾಪ್ರಭುತ್ವ ಸೂಚ್ಯಂಕ’ದಲ್ಲೂ ಭಾರತ 10 ಸ್ಥಾನಗಳನ್ನು ಕುಸಿದು 51ನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.

- Advertisement -