ಭಾರತದ ಆರ್ಥಿಕ ಕುಸಿತ: ಆರ್ಥಿಕ ತಜ್ಞರ ಕಳವಳ

0
203

ಹೊಸದಿಲ್ಲಿ: ಭಾರತದ ಆರ್ಥಿಕ ಪ್ರಗತಿ ದರದ ಕುಸಿತದ ಬಗ್ಗೆ ಆರ್‌ಬಿಐ ಮುಖ್ಯಸ್ಥ ಶಕ್ತಿಕಾಂತ ದಾಸ್ ಅವರೊಂದಿಗೆ ದೇಶದ ಪ್ರಮುಖ ಅರ್ಥಶಾಸ್ತ್ರಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಆರ್‌ಬಿಐ ಗವರ್ನರ್ ಜೊತೆ ಆರ್ಥಿಕ ಬೆಳವಣಿಗೆಗಾಗಿ ವಿತ್ತೀಯ ನೀತಿಯನ್ನು ಜಾರಿಗೊಳಿಸುವ ಸಂಬಂಧ ನಡೆದ ಸಭೆಯಲ್ಲಿ ಆರ್ಥಿಕ ತಜ್ಞರು ಈ ವಿಷಯವನ್ನು ಪ್ರತಿಪಾದಿಸಿರುವುದಾಗಿ ರಾಯಿಟರ್ಸ್.ಕಾಮ್ ವರದಿ ಮಾಡಿದೆ.

 ‘‘ಹಣಕಾಸಿನ ವಿಸ್ತರಣೆಗೆ ಯಾವುದೇ ಅವಕಾಶವಿಲ್ಲದ ಕಾರಣ ವಿತ್ತೀಯ ನೀತಿಯ ಪ್ರಗತಿಯನ್ನು ಹೆಚ್ಚಿಸಲು ಭಾರೀ ದುರಸ್ತಿ ಅಗತ್ಯವೆಂದು’’ ಸಭೆಯಲ್ಲಿ ಪಾಲ್ಗೊಂಡ ಬಹುತೇಕ ಅರ್ಥಶಾಸ್ತ್ರಜ್ಞರು ಹೇಳಿರುವುದಾಗಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಏಪ್ರಿಲ್ 4ರಂದು ನಡೆಯುವ ವಿತ್ತೀಯ ನೀತಿ ಸಮಿತಿ ಸಭೆ (ಎಮ್‌ಪಿಸಿ) ಹಿನ್ನೆಲೆಯಲ್ಲಿ ಗವರ್ನರ್ ಶಕ್ತಿಕಾಂತ್‌ದಾಸ್ ಹತ್ತಕ್ಕೂ ಅಧಿಕ ಆರ್ಥಿಕ ತಜ್ಞರನ್ನು ಭೇಟಿಯಾಗಿ ಅಭಿಪ್ರಾಯ ಸಂಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here