ಭಾರತದಲ್ಲಿ 76 ಲಕ್ಷದ ಗಡಿ ದಾಟಿದ ಕೋವಿಡ್ -19 ಪ್ರಕರಣಗಳು

ನವದೆಹಲಿ : ಭಾರತದ ಕೋವಿಡ್ -19 ಪ್ರಕರಣಗಳ ಸಂಖ್ಯೆ 76 ಲಕ್ಷದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ ಹೊಸ 54,044 ಪ್ರಕರಣಗಳು ವರದಿಯಾಗುವ ಮೂಲಕ, ಸೋಂಕಿತರ ಸಂಖ್ಯೆ 76,51,107 ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 717 ಆಗಿದ್ದು, ಒಟ್ಟು 1,15,914ಕ್ಕೆ ಏರಿಕೆಯಾಗಿದೆ.

ಒಟ್ಟು 7,40,090 ಸಕ್ರಿಯ ಸೋಂಕಿತ ಪ್ರಕರಣಗಳಿದ್ದು, 67,95,103 ಪ್ರಕರಣಗಳು ಗುಣಮುಖವಾಗಿವೆ. ಗುಣಮುಖ ದರ ಶೇ.88.81ರಷ್ಟಿದೆ. ಲಸಿಕೆ ದೊರೆತರೆ ಭಾರತದಲ್ಲಿ ಪ್ರಥಮ ಹಂತದಲ್ಲಿ ಆರೋಗ್ಯ ಸೇವಾ ಸಿಬ್ಬಂದಿ ಸೇರಿದಂತೆ ಸುಮಾರು 3 ಕೋಟಿ ಜನರಿಗೆ ಲಸಿಕೆ ನೀಡಬೇಕಾಗಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

- Advertisement -

ಜಾಗತಿಕವಾಗಿ 4.07 ಕೋಟಿ ಜನರು ಕೋವಿಡ್ – 19 ಸೋಂಕಿಗೆ ಗುರಿಯಾಗಿದ್ದಾರೆ. ಅವರಲ್ಲಿ 11,23,824 ಮಂದಿ ಮೃತಪಟ್ಟಿದ್ದಾರೆ. ಜಾಗತಿಕ ಮಟ್ಟದಲ್ಲಿ 2.78 ಕೋಟಿ ಮಂದಿ ಗುಣಮುಖರಾಗಿದ್ದಾರೆ.