ಭಟ್ಕಳ | ದುರ್ಗಾಪರಮೇಶ್ವರಿ ದೇವಸ್ಥಾನದ ಲಕ್ಷಾಂತರ ರೂ. ಬೆಲೆಬಾಳುವ ಆಭರಣ ಕಳವು

Prasthutha|

ಭಟ್ಕಳ : ಇಲ್ಲಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸುಮಾರು 40 ಲಕ್ಷ ರೂ. ಮೌಲ್ಯದ ಆಭರಣಗಳು ಕಳವಾಗಿರುವ ಬಗ್ಗೆ ವರದಿಯಾಗಿದೆ. ಕಳೆದ ರಾತ್ರಿ ಘಟನೆಗೆ ಬೆಳಕಿಗೆ ಬರುತ್ತಿದ್ದಂತೆ ದೇವಸ್ಥಾನದ ಅರ್ಚಕ ನಾಪತ್ತೆಯಾಗಿರುವುದಾಗಿ ದೇವಾಲಯದ ಅಧಿಕಾರಿಗಳು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ ಎಂದು ‘ಕನ್ನಡಪ್ರಭ ಡಾಟ್ ಕಾಮ್’ ವರದಿ ಮಾಡಿದೆ.

ನಾಪತ್ತೆಯಾದ ಅರ್ಚಕ ಯಲ್ಲಾಪುರದ ಸತೀಶ್ ಭಟ್ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೇವಸ್ಥಾನದಲ್ಲಿ ನವರಾತ್ರಿ ಆಚರಣೆಯಿದ್ದುದರಿಂದ, ದೇವರಿಗೆ ಆಭರಣಗಳನ್ನು ತೊಡಿಸಲು ದೇವಾಲಯದ ಪ್ರಧಾನ ಅರ್ಚಕರು ಆಭರಣ ಪೆಟ್ಟಿಗೆಯನ್ನು ತೆರೆದಾಗ ಘಟನೆ ಬೆಳಕಿಗೆ ಬಂದಿದೆ.

- Advertisement -

ಆಭರಣದ ಲಾಕರ್ ಕೀಗಳನ್ನು ಹೊಂದಿದ್ದ ಕಾರಣ ದೇವಾಲಯದ ಅಧಿಕಾರಿಗಳು ಸತೀಶ್ ಭಟ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ, ಸತೀಶ್ ಭಟ್ ದೂರವಾಣಿ ಸಂಪರ್ಕಕ್ಕೆ ಸಿಕ್ಕಿಲ್ಲ. ಆಗ ದೇವಸ್ಥಾನ ಆಡಳಿತ ಮಂಡಳಿ ಲಾಕರ್ ತೆರೆಯಲು ನಿರ್ಧರಿಸಿದೆ.

ಸತೀಶ್ ಭಟ್ ಕಳೆದ ವರ್ಷ ದೇವಸ್ಥಾನದ ಕೆಲಸಕ್ಕೆ ಸೇರಿದ್ದ. ಆದರೆ, ಒಂದು ತಿಂಗಳಿನಿಂದ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರಲಿಲ್ಲ. ಈ ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸತೀಶ್ ಭಟ್ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.

- Advertisement -