ಭಕ್ತನಿಗೆ ಅಶ್ಲೀಲ ವೀಡಿಯೋ ರವಾನೆ|ತಿರುಪತಿ ದೇವಸ್ಥಾನದ ಸಿಬ್ಬಂದಿ ಬಂಧನ

Prasthutha|

ತಿರುಪತಿ : ದೇವಾಲಯದಲ್ಲಿ ಪೂಜೆಗೆ ಸಂಬಂಧಿಸಿದ ಅನುಮಾನಗಳನ್ನು ನಿವಾರಿಸಲು ಇ-ಮೇಲ್ ಕಳುಹಿಸಿದ ಭಕ್ತನಿಗೆ ಉತ್ತರವಾಗಿ ಅಶ್ಲೀಲ ತಾಣದ ವೆಬ್ ಲಿಂಕನ್ನು ಕಳುಹಿಸಿದ ಆರೋಪದಲ್ಲಿ ದೇವಾಲಯದ ಸಿಬ್ಬಂದಿಯನ್ನು ಬಂಧಿಸಲಾಗಿದೆ. ದೇವಾಲಯದಲ್ಲಿ ನಡೆಯುವ ಶತಮಾನ ಭವತಿ ಕಾರ್ಯಕ್ರಮದ ಕುರಿತು ಅನುಮಾನಗಳನ್ನು ಕೇಳಿದ ಭಕ್ತನಿಗೆ ಅಶ್ಲೀಲ ವೆಬ್ ಸೈಟ್ ಲಿಂಕ್ ತಿರುಮಲ ತಿರುಪತಿ ದೇವಾಲಯದ ಅಧಿಕೃತ ಇ-ಮೇಲ್ ನಿಂದ ಕಳುಹಿಸಲಾಗಿದೆ. ಇದರೊಂದಿಗೆ ಭಕ್ತನು ದೇವಾಲಯದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ.

- Advertisement -

ನಂತರ ತನಿಖೆ ನಡೆಸಿದ ಪೊಲೀಸರು ದೇವಾಲಯದ ಸಿಬ್ಬಂದಿಯನ್ನು ಸೈಬರ್ ಅಪರಾಧದಡಿ ಬಂಧಿಸಿದ್ದಾರೆ. ಇ-ಮೇಲ್ ಕಳುಹಿಸಿದ ಸಿಬ್ಬಂದಿಯೊಂದಿಗೆ ಕರ್ತವ್ಯದಲ್ಲಿದ್ದಾಗ ಅಶ್ಲೀಲ ವೀಡಿಯೋ ನೋಡಿದ ಇನ್ನೂ 25 ಸಿಬ್ಬಂದಿಗಳನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -