ಬೈಡನ್ ಗೆ ಸವಾಲುಗಳ ಸುರಿಮಳೆ | ಅಮೆರಿಕದಲ್ಲಿ ಮತ್ತೆ ಲಾಕ್ ಡೌನ್ ಕುರಿತು ಚರ್ಚೆ

Prasthutha: November 15, 2020

ವಾಷಿಂಗ್ಟನ್: ಇದೀಗ ಅಮೆರಿಕದಲ್ಲಿ ಕೊರೋನಾ ವ್ಯಾಪಕವಾಗಿ ಹೆಚ್ಚುತ್ತಿದ್ದು, ಸೋಂಕು ನಿಯಂತ್ರಿಸಲು ಮತ್ತೆ ಲಾಕ್ ಡೌನ್ ಮಾಡಬೇಕೇ ಬೇಡವೇ ಎನ್ನುವ ಗೊಂದಲ ಅಧ್ಯಕ್ಷ ಜೋ ಬೈಡನ್ಗೆ ಎದುರಾಗಿದೆ.

ಅಮೆರಿಕದ ಸಾರ್ವಜನಿಕ ಆರೋಗ್ಯದ ವಿಚಾರದಲ್ಲಿ ಟ್ರಂಪ್ ಗಿಂತ ನಾನು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳುವೆ ಎಂದು ತಮ್ಮ ಚುನಾವಣಾ ಪ್ರಚಾರದುದ್ದಕ್ಕೂ ಹೇಳಿಕೊಂಡಿದ್ದ ಬೈಡನ್, ಕೋವಿಡ್ ಉಚಿತ ಪರೀಕ್ಷೆ, ಸಾವಿರಾರು ಆರೋಗ್ಯ ಕಾರ್ಯಕತರ ನೇಮಕ ಮಾಡುವುದು ಹೀಗೆ ಅನೇಕ ಭರವಸೆ ನೀಡಿದ್ದರು.

“ನಾನು ಅಧ್ಯಕ್ಷನಾಗಿ ಆಯ್ಕೆಯಾಗಿರಬಹುದು, ಆದರೆ ಮುಂದಿನ ವರ್ಷದವರೆಗೆ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಿಲ್ಲ. ಕೋವಿಡ್ ಸಾಂಕ್ರಮಿಕವು ದಿನಾಂಕಗಳನ್ನು ನೋಡುವುದಿಲ್ಲ. ಈಗ ಸೋಂಕು ತ್ರೀವ್ರವಾಗಿ ಹೆಚ್ಚುತ್ತಿದ್ದು, ಇದರ ನಿಯಂತ್ರಣಕ್ಕೆ ಪ್ರಸ್ತುತ ಆಡಳಿತದಿಂದ ತುರ್ತು ಕ್ರಮದ ಅಗತ್ಯವಿದೆ” ಎಂದು ಬೈಡನ್ ಹೇಳಿದ್ದಾರೆ.

“ಬೈಡನ್ ಲಾಕ್ ಡೌನ್ ಘೋಷಿಸಿದಲ್ಲಿ ನಾನದನ್ನು ಬೆಂಬಲಿಸುವುದಿಲ್ಲ. ಇದು ಅಮೆರಿಕದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ” ಎಂದು ಡೊನಾಲ್ಡ್ ಟ್ರಂಪ್ ವಿರೋಧ ವ್ಯಕ್ತಪಡಿಸಿದ್ದಾರೆ.

ಅಮೆರಿಕದಲ್ಲಿ ಶನಿವಾರದಂದು 1.70 ಲಕ್ಷದಷ್ಟು ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕು ನಿಯಂತ್ರಣಕ್ಕೆ ಮಾಸ್ಕ್ ಬಳಸುವಂತೆ ಬೈಡೆನ್ ಜನರಲ್ಲಿ ಮನವಿ ಮಾಡಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ