ಬೇಟೆ ಅರಸಿ ದೊಡ್ಡ ಗೇಟ್ ಹಾರಿದ ಚಿರತೆ | ವೀಡಿಯೊ ವೈರಲ್

ಮುಂಬೈ : ಚಿರತೆಯೊಂದು ತನ್ನ ಆಹಾರವನ್ನು ಬೆನ್ನಟ್ಟುತ್ತಾ ಎತ್ತರದ ಗೇಟ್ ಒಂದರ ಮೇಲೆ ಹಾರಿ ದಾಟುವ ಕುತೂಹಲಕಾರಿ ವೀಡಿಯೊವೊಂದು ವೈರಲ್ ಆಗಿದೆ. ಕೆಲ ದಿನಗಳ ಹಿಂದೆ ಪೋಸ್ಟ್ ಆಗಿರುವ ಈ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಜನರಿಂದ ವೀಕ್ಷಿಸಲ್ಪಟ್ಟಿದೆ

ಮುಂಬೈ ಮೂಲದ ಚಿರತೆ-ಮಾನವನ ಸಂಬಂಧ ಕುರಿತ ವನ್ಯಜೀವಿ ಸಂಶೋಧಕ ನಿಕಿತ್ ಸುರ್ವೆ ಎಂಬವರು ಈ ವೀಡಿಯೊ ಶೇರ್ ಮಾಡಿದ್ದಾರೆ. ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ್ ನಂದ ಎಂಬವರೂ ಈ ವೀಡಿಯೊ ಶೇರ್ ಮಾಡಿದ್ದಾರೆ.

- Advertisement -

ಕಪ್ಪುಬಿಳುಪು ಸಿಸಿಟಿವಿ ತುಣುಕಿನಲ್ಲಿ ಸಣ್ಣ ಪ್ರಾಣಿಯೊಂದನ್ನು ಚಿರತೆ ಬೆನ್ನಟ್ಟುತ್ತಿರುವುದು ಮತ್ತು ದೊಡ್ಡ ಗೇಟ್ ಒಂದನ್ನು ಅದು ಬೆನ್ನಟ್ಟಿಕೊಂಡು ಬಂದು ಹಾರುವುದು ದಾಖಲಾಗಿದೆ. ಘಟನೆ ನಡೆದಿರುವುದು ಎಲ್ಲಿ ಎಂಬುದು ಸ್ಪಷ್ಟವಿಲ್ಲ.

- Advertisement -