ಬೆಂಗಳೂರು | ಸಿನಿಮೀಯ ಮಾದರಿಯಲ್ಲಿ ಮೊಬೈಲ್ ಫೋನ್ ಸಾಗಾಟ ಟ್ರಕ್ ದರೋಡೆ

Prasthutha|

15 ಕೋಟಿ ರೂ. ಮೌಲ್ಯದ 14,500 ಫೋನ್ ಕಳ್ಳರ ಪಾಲು  

ಬೆಂಗಳೂರು : ಸಿನಿಮೀಯ ಮಾದರಿಯಲ್ಲಿ ಹೊಸೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊಬೈಲ್ ಫೋನ್ ಸಾಗಿಸುತ್ತಿದ್ದ ಟ್ರಕ್ ಒಂದರ ದರೋಡೆ ನಡೆದಿದೆ. ತಮಿಳುನಾಡಿನ ಶ್ರೀಪೆರುಂಬುದೂರಿನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಟ್ರಕ್ ನಲ್ಲಿದ್ದ ಸುಮಾರು 15 ಕೋಟಿ ರೂ. ಮೌಲ್ಯದ, 14,500 ಮೊಬೈಲ್ ಫೋನ್ ಗಳನ್ನು ಲೂಟಿ ಹೊಡೆಯಲಾಗಿದೆ.

- Advertisement -

ಶ್ರೀಪೆರುಂಬುದೂರುನ ಎಂಐ ಮೊಬೈಲ್ಸ್ ಘಟಕದಿಂದ ತಯಾರಾದ ಮೊಬೈಲ್ ಗಳನ್ನು ಮುಂಬೈಗೆ ಸಾಗಿಸಲಾಗುತಿತ್ತು. ಹೊಸೂರು ಸಮೀಪದ ಮೇಲು ಮಲೈ ಅರಣ್ಯ ಪ್ರದೇಶದಲ್ಲಿ ದರೋಡೆ ಮಾಡಲಾಗಿದೆ.

ಬುಧವಾರ ರಾತ್ರಿ 2 ಗಂಟೆ ಸುಮಾರಿಗೆ ಒಂದು ಗುಂಪು ಟ್ರಕ್ ಅನ್ನು ಅರಣ್ಯ ಪ್ರದೇಶದಲ್ಲಿ ತಡೆ ಹಿಡಿದಿದೆ. ಲಾರಿ ಡ್ರೈವರ್ ಅರುಣ್ ಮತ್ತು ಸಹಾಯಕ ಕುಮಾರ್ ಗೆ ಥಳಿಸಿ, ಅವರನ್ನು ಮರಕ್ಕೆ ಕಟ್ಟಿ ಹಾಕಲಾಗಿದೆ. ಬಳಿಕ ಅಲ್ಲಿಂದ ಸುಮಾರು 10 ಕಿ.ಮೀ. ವರೆಗೆ ಟ್ರಕ್ ಅನ್ನು ಗುಂಪು ಚಲಾಯಿಸಿಕೊಂಡು ಹೋಗಿದ್ದು, ಅಲ್ಲಿ ಅದರಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದ್ದುದರಿಂದ, ಬೇರೆ ಟ್ರಕ್ ನಲ್ಲಿ ಮೊಬೈಲ್ ಫೋನ್ ಗಳನ್ನು ಸಾಗಿಸಿದೆ.  

- Advertisement -