ಬೆಂಗಳೂರು-ಮಂಗಳೂರು ವಿಮಾನ ಹಾರಾಟ ಮರು ಆರಂಭ | ಏರ್ ಇಂಡಿಯಾ ಘೋಷಣೆ

Prasthutha|


ಮಂಗಳೂರು : ಪ್ರಸ್ತುತ ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ವಿಮಾನ ಹಾರಾಟಕ್ಕೆ ಅ.26ರಿಂದ ಮರು ಚಾಲನೆ ದೊರೆಯಲಿದ್ದು, ಬೆಂಗಳೂರು-ಮಂಗಳೂರು-ಬೆಂಗಳೂರು ವಿಮಾನಗಳು ಅಂದಿನಿಂದ ಹಾರಾಟ ನಡೆಸಲಿವೆ ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ. ವಾರದಲ್ಲಿ ಮೂರು ದಿನ ಮಾತ್ರ ಕಾರ್ಯಾಚರಿಸಲು ಸಂಸ್ಥೆ ನಿರ್ಧರಿಸಿದೆ.

ಸೋಮವಾರ, ಬುಧವಾರ ಶುಕ್ರವಾರ ಬೆಂಗಳೂರು-ಮಂಗಳೂರು-ಬೆಂಗಳೂರು ವಿಮಾನಗಳು ಹಾರಾಟ ಆರಂಭಿಸಲಿವೆ. ಎಐ 575 ಸಂಜೆ 4:00 ಗಂಟೆಗೆ ಬೆಂಗಳೂರಿನಿಂದ ಹೊರಟು, ಸಂಜೆ 5:20ಕ್ಕೆ ಮಂಗಳೂರು ತಲುಪಲಿದೆ.

- Advertisement -

ಎಐ 576 ವಿಮಾನ ಸಂಜೆ 6:00 ಗಂಟೆಗೆ ಮಂಗಳೂರಿನಿಂದ ಹೊರಟು ಸಂಜೆ 7:20ಕ್ಕೆ ಬೆಂಗಳೂರು ತಲುಪಲಿದೆ. ಪ್ರಯಾಣ ದರ 2,342 ರೂ.ಯಿಂದ ಆರಂಭಗೊಳ್ಳಲಿದೆ ಎಂದು ಏರ್ ಇಂಡಿಯಾ ಮೂಲಗಳು ವರದಿ ಮಾಡಿವೆ.

- Advertisement -