ಬುಲಂದ್ ಶಹರ್ ಹಿಂಸಾಚಾರ: ಬಿಡುಗಡೆಯಾದ ಆರೋಪಿಗಳಿಗೆ ಭವ್ಯ ಸ್ವಾಗತ

0
23

ಬುಲಂದ್‌ಶಹರ್: ಕಳೆದ ವರ್ಷ ಪೊಲೀಸ್ ಅಧಿಕಾರಿ ಹತ್ಯೆಗೆ ಕಾರಣವಾದ ಬುಲಂದ್‌ಶಹರ್ ಗುಂಪು ಹಿಂಸಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡ 6 ಮಂದಿ ಆರೋಪಿಗಳಿಗೆ ಸ್ಥಳೀಯರು ಭವ್ಯ ಸ್ವಾಗತ ನೀಡಿ ಗ್ರಾಮಕ್ಕೆ ಬರ ಮಾಡಿಕೊಂಡಿದ್ದಾರೆ.

ಬುಲಂದ್‌ಶಹರ್ ಪ್ರಕಣರದಲ್ಲಿ ಇಬ್ಬರು ಪ್ರಮುಖ ಆರೋಪಿಗಳಾದ ಭಾರತೀಯ ಜನತಾ ಯುವ ಮೋರ್ಚಾ ಸದಸ್ಯ ಶಿಖಾರ್ ಅಗರ್ವಾಲ್ ಹಾಗೂ ಜೀತು ಘೌಜಿಯನ್ನು ಹೂ ಹಾರ ಹಾಕಿ, ‘ಜೈ ಶ್ರೀರಾಮ್’, ‘ಭಾರತ್ ಮಾತಾ ಕಿ ಜೈ’, ‘ವಂದೇ ಮಾತರಂ’ ಘೋಷಣೆ ಕೂಗಿ ಸ್ಥಳೀಯರು ಸ್ವಾಗತಿಸಿರುವ ವೀಡಿಯೊವನ್ನು ಸ್ಥಳೀಯ ಪತ್ರಕರ್ತರೋರ್ವರು ದಾಖಲಿಸಿಕೊಂಡಿದ್ದಾರೆ.

ಇತರ ಆರೋಪಿಗಳನ್ನು ಹೇಮು, ಉಪೇಂದ್ರ, ರಾಘವ್, ಸೌರವ್ ಹಾಗೂ ರೋಹಿತ್ ರಾಘವ್ ಎಂದು ಗುರುತಿಸಲಾಗಿದೆ. ಗದ್ದೆಯೊಂದರಲ್ಲಿ ಪರಿತ್ಯಕ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಎಸ್‌ಯುವಿ ವಾಹನದ ಒಳಗಡೆ ಪೊಲೀಸ್ ಇನ್ಸ್‌ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರ ಮೃತದೇಹ ಪತ್ತೆಯಾದ ಬಳಿಕ ಇವರನ್ನು ಬಂಧಿಸಲಾಗಿತ್ತು.

ಕಳೆದ ವರ್ಷ ಮಹಾವ್ ಗ್ರಾಮದ ಹೊರವಲಯದ ಕಾಡಿನಲ್ಲಿ 25 ಜಾನುವಾರುಗಳ ಕಳೇಬರ ಪತ್ತೆಯಾದ ಬಳಿಕ ಬುಲಂದ್‌ಶಹರ್‌ನ ಸಿಯಾನಾ ಪ್ರದೇಶದಲ್ಲಿ ಗುಂಪೊಂದು ಹಿಂಸಾಚಾರ ನಡೆಸಿತ್ತು. ಅಕ್ರಮವಾಗಿ ಗೋಹತ್ಯೆ ನಡೆಸುತ್ತಿರುವುದರಿಂದ ಈ ಕಳೇಬರಗಳು ಕಂಡು ಬಂದಿದೆ ಎಂದು ಸ್ಥಳೀಯರು ಆರೋಪಿಸಿದ್ದರು. ಈ ಸಂದರ್ಭ ಪೊಲೀಸ್ ಇನ್ಸ್‌ಪೆಕ್ಟರ್ ಸುಭೋದ್ ಕುಮಾರ್ ಸಿಂಗ್ ಹಾಗೂ ಸ್ಥಳೀಯ ಯುವಕನೋರ್ವ ಹತ್ಯೆಯಾಗಿದ್ದರು.

LEAVE A REPLY

Please enter your comment!
Please enter your name here