ಬುರ್ಜ್ ಖಲೀಫಾದ ಮೇಲೆ ‘ಕಿಂಗ್‌ಖಾನ್’ ಜನ್ಮದಿನದ ಶುಭಾಶಯ

Prasthutha|

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಗೆ ಬುರ್ಜ್ ಖಲೀಫಾದ ಉತ್ತುಂಗದಲ್ಲಿ ದುಬೈ ಶುಭಾಶಯ ಕೋರಿದೆ. ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾವನ್ನು ಸಂಪೂರ್ಣ ಎಲ್ಇಡಿ ದೀಪಗಳಿಂದ ಅಲಂಕೃತಗೊಳಿಸಿ ಯುಎಇ ಬಾಲಿವುಡ್ ನ ಕಿಂಗ್‌ಖಾನ್ ಗೆ ಶುಭಾಶಯ ಕೋರಿದೆ.

- Advertisement -

ಹುಟ್ಟುಹಬ್ಬದಂದು ಕುಟುಂಬದೊಂದಿಗೆ ದುಬೈನಲ್ಲಿದ್ದ ಶಾರುಖ್ ಖಾನ್ ಅವರಿಗೆ ವಿಶ್ವದ ವಿವಿಧ ಭಾಗಗಳಿಂದ ಶುಭಾಶಯಗಳು ಹರಿದು ಬಂದಿದೆ. ಆದರೆ ಸ್ವತಃ ಬುರ್ಜ್ ಖಲೀಫಾ ಸೂಪರ್ ಸ್ಟಾರ್ ಗೆ ಶುಭಾಶಯ ಕೋರಿರುವುದು ವಿಶೇಷವಾಗಿತ್ತು.

‘ವಿಶ್ವದ ಅತಿ ಎತ್ತರದ ಪರದೆಯಲ್ಲಿ ನನ್ನನ್ನು ನೋಡುವ ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗುತ್ತಿದೆ. ನನ್ನ ಮುಂದಿನ ಚಿತ್ರ ಬಿಡುಗಡೆಯಾಗುವ ಮೊದಲು ಈ ದೊಡ್ಡ ಪರದೆಯಲ್ಲಿ ನನ್ನನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು ಮೊಹಮ್ಮದ್.’ ಎಂದು ಶಾರುಖ್ ಖಾನ್ ಫೇಸ್‌ಬುಕ್ ನಲ್ಲಿ ಬರೆದಿದ್ದಾರೆ.

- Advertisement -