ಬೀದಿಗೆ ಬಂದ ಕಾಂಗ್ರೆಸ್ ಒಳಜಗಳ: ಕಪಿಲ್ ಸಿಬಲ್ ಗೆ ಪಕ್ಷ ಬಿಟ್ಟು ಹೊರನಡೆಯಬಹುದು ಎಂದ ಕಾಂಗ್ರೆಸ್ ನಾಯಕ

Prasthutha: November 18, 2020


ಬಿಹಾರ ಸೋಲಿನ ನಂತರ ಕಾಂಗ್ರೆಸ್‌ನಲ್ಲಿ ಪ್ರಾರಂಭವಾದ ಸ್ವಯಂ ವಿಮರ್ಶೆ ಮತ್ತು ವಾಗ್ವಾದಗಳು ತೀವ್ರವಾಗಿ ಮುಂದುವರಿಯುತ್ತಿದೆ. ಕಾಂಗ್ರೆಸ್‌ನ ನಾಯಕ ಆದಿರ್ ರಂಜನ್ ಚೌಧರಿ, ಕಪಿಲ್ ಸಿಬಲ್ ಅವರನ್ನು ಉಲ್ಲೇಖಿಸಿ ಸುಮ್ಮನೆ ಕುಳಿತು ಟೀಕಿಸುವವರು ಕಾಂಗ್ರೆಸ್ ತೊರೆಯಬಹುದು ಅಥವಾ ಹೊಸ ಪಕ್ಷವೊಂದನ್ನು ಕಟ್ಟಬಹುದು ಎಂದು ಹೇಳಿದ್ದಾರೆ.
“ಕಾಂಗ್ರೆಸ್ ತಮಗೆ ಸರಿಯಾದ ಪಕ್ಷವಲ್ಲವೆಂದು ಯಾವುದಾದರೂ ನಾಯಕರು ಭಾವಿಸುವುದಾದರೆ ತಮಗೆ ಪ್ರಗತಿಪರವೆಂದು ಅನಿಸುವ ಮತ್ತು ತಮ್ಮ ಹಿತಾಸಕ್ತಿಗೆ ಪೂರಕವಾದ ಹೊಸ ಪಕ್ಷವನ್ನು ಕಟ್ಟಬಹುದು ಅಥವಾ ಯಾವುದಾದರೂ ಪಕ್ಷವನ್ನು ಸೇರಬಹುದು. ಆದರೆ ಇಂತಹ ಮುಜುಗರವುಂಟುಮಾಡುವ ಚಟುವಟಿಕೆಯಲ್ಲಿ ತೊಡಗಬಾರದು. ಅದು ಪಕ್ಷದ ವಿಶ್ವಾಸಾರ್ಹತೆಯನ್ನು ನಾಶಮಾಡುತ್ತದೆ” ಎಂದು ಅವರು ಹೇಳಿದರು.

ಬಿಹಾರ ಸೇರಿದಂತೆ ಚುನಾವಣೆಗಳಲ್ಲಿ ಸೋಲಿನ ನಂತರ ಕಪಿಲ್ ಸಿಬಲ್ ನಾಯಕತ್ವದ ಬಗ್ಗೆ ಟೀಕಿಸಿದ್ದರು. ಇವರಿಗೆ ಬೆಂಬಲವಾಗಿ 22 ವಿಮರ್ಶಕರು ಸೋನಿಯಾ ಗಾಂಧಿಗೆ ಪತ್ರ ಬರೆದಾಗ ವಿವಾದ ಉಲ್ಬಣಗೊಂಡಿತು. ಏನನ್ನೂ ಮಾಡದೆ ಟೀಕಿಸುವುದು ಸರಿಯಲ್ಲ ಎಂದು ಅಧೀರ್ ರಂಜನ್ ಚೌಧರಿ ಅವರ ಪ್ರತಿಕ್ರಿಯೆ. ಮೊದಲು ಕೆಲಸ ಮಾಡಿ ನಂತರ ಟೀಕಿಸುವುದು ಸರಿಯಾದ ಕ್ರಮ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ಅಶೋಕ್ ಗೆಹ್ಲೋಟ್, ಸಲ್ಮಾನ್ ಖುರ್ಷಿದ್ ಮತ್ತು ತಾರಿಕ್ ಅನ್ವರ್ ಕೂಡ ಕಪಿಲ್ ಸಿಬಲ್ ಅವರ ಹೇಳಿಕೆಯನ್ನು ವಿರೋಧಿಸಿದ್ದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ