ಬಿ.ಸಿ.ರೋಡ್ ಘಟನೆಗೆ ಸಂಬಂಧಿಸಿ ಸಂಘಟನೆಯ ತೇಜೋವಧೆ ಖಂಡನಾರ್ಹ : ಪಾಪ್ಯುಲರ್ ಫ್ರಂಟ್

Prasthutha|

ಬಿ.ಸಿ.ರೋಡ್ ಆಸುಪಾಸಿನಲ್ಲಿ ನಡೆದ ಅಹಿತಕರ ಘಟನೆಯೊಂದಕ್ಕೆ ಸಂಬಂಧಿಸಿ ಸಂಘಟನೆಯ ತೇಜೋವಧೆ ನಡೆಸುತ್ತಿರುವ ವಿಚಾರವು ಖಂಡನಾರ್ಹವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬಂಟ್ವಾಳ ವಲಯ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಹೇಳಿದ್ದಾರೆ.

ಬಿ.ಸಿ.ರೋಡ್ ಅಜ್ಜಿಬೆಟ್ಟುವಿನಲ್ಲಿ ಯುವಕನೋರ್ವನಿಗೆ ಚೂರಿ ಇರಿತ ಪ್ರಕರಣದೊಂದಿಗೆ ಸಂಘಟನೆಯ ಹೆಸರನ್ನು ತಳುಕು ಹಾಕಲಾಗುತ್ತಿದೆ‌. ಪೊಲೀಸರ ತನಿಖೆಯು ಪ್ರಾರಂಭಿಕ ಹಂತದಲ್ಲಿದ್ದು, ಇದರ‌ ಬಗ್ಗೆ ಯಾವುದೇ ವಿಚಾರವನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆದರೂ ಕೆಲವೊಂದು ಮಾಧ್ಯಮಗಳು ಆರೋಪಿಗಳು ಪಾಪ್ಯುಲರ್ ಫ್ರಂಟ್ ಪದಾಧಿಕಾರಿಗಳು ಎಂದು ವರದಿ ಮಾಡುತ್ತಿರುವುದು ವಿಪರ್ಯಾಸವಾಗಿದೆ‌.

- Advertisement -

ವಿನಾ ಕಾರಣ ಸಂಘಟನೆಯ ವಿರುದ್ಧ ನಡೆಸುತ್ತಿರುವ ಅಪಪ್ರಚಾರಗಳನ್ನು ಸಹಿಸಲು ಸಾಧ್ಯವಿಲ್ಲ. ಅಲ್ಲದೇ ಪ್ರಕರಣದ ಬಗ್ಗೆ‌ ಪೊಲೀಸರು ಈ ವರೆಗೂ ಅಧಿಕೃತ ಹೇಳಿಕೆಯನ್ನು ಬಿಡುಗಡೆಗೊಳಿಸಿಲ್ಲ. ಈ ಮಧ್ಯೆ ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಪೋರ್ಟಲ್ ಮಾಧ್ಯಮಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಬ್ದುಲ್ ರಹಿಮಾನ್ ಎಚ್ಚರಿಸಿದ್ದಾರೆ.

- Advertisement -