ಬಿಹಾರ: ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ದೇವೇಂದರ್ ಫಡ್ನವೀಸ್

Prasthutha|

ಹೊಸದಿಲ್ಲಿ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದರ್ ಫಡ್ನವೀಸ್ ರನ್ನು ಬಿಹಾರ ವಿಧಾನಸಭಾ ಚುನಾವಣೆಗೆ ಉಸ್ತುವಾರಿಯಾಗಿ ಬಿಜೆಪಿ ನೇಮಿಸಿದೆ.

243 ಸದಸ್ಯರ ರಾಜ್ಯ ಅಸೆಂಬ್ಲಿಗೆ ನಡೆಯಲಿರುವ ಮೂರು ಹಂತಗಳ ಚುನಾವಣೆಯ ಕುರಿತು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡ ರಾಜ್ಯ ನಾಯಕರೊಂದಿಗೆ ನಡೆಸಿದ ಸಭೆಯಲ್ಲಿ ಈ ಘೋಷಣೆ ಹೊರಬಿದ್ದಿದೆ.

- Advertisement -

ಜೆಡಿಯು ಮತ್ತು ಎಲ್.ಜೆ.ಪಿಯಂತಹ ಸಮಾನ ಮಿತ್ರರೊಂದಿಗೆ ಸೀಟು ಹಂಚಿಕೆಯ ಕುರಿತೂ ಮಾತುಕತೆಗಳು ಇಂದು ನಡೆದಿದೆ. ಈ ವಿಷಯದಲ್ಲಿ ಎಲ್.ಜೆ.ಪಿ  ನಿರಾಶಗೊಂಡಿದ್ದು ಬಿಜೆಪಿಯ ಪ್ರಸ್ತಾಪದಿಂದ ತಾನು ಅಸಂತುಷ್ಟಗೊಂಡಿರುವುದಾಗಿ ಹೇಳಿದೆ.

- Advertisement -