ಬಿಹಾರ ಚುನಾವಣೆ : ಎಸ್‌ಡಿಪಿಐ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Prasthutha|


ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನು ಎಸ್‌ಡಿಪಿಐ ಬಿಡುಗಡೆ ಮಾಡಿದೆ. ಎಸ್‌ಡಿಪಿಐ ರಾಷ್ಟ್ರಾಧ್ಯಕ್ಷ ಎಂ.ಕೆ ಫೈಝಿ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದರು.
ಶಮೀಂ ಅಖ್ತರ್, ಮುಹಮ್ಮದ್ ಶಬೀರ್ ಆಲಂ, ಮೆಹಬೂಬುರ್ರಹ್ಮಾನ್, ನೂರುಲ್ ಹಖ್, ಮುನವ್ವರ್ ಹುಸೈನ್, ನಾಸೀಂ ಅಖ್ತರ್, ಮುಹಮ್ಮದ್ ಮೆಹಬೂಬ್ , ಮುಹಮ್ಮದ್ ನಾಸೀಂ, ಮುಹಮ್ಮದ್ ಕೈಫ್ ಸೇರಿದಂತೆ 15 ಜನರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಬಿಹಾರ ಚುನಾವಣೆಯನ್ನು ಎದುರಿಸಲು ಎಸ್‌ಡಿಪಿಐ ಸೇರಿದಂತೆ ಪಪ್ಪು ಯಾದವ್ ಅವರ ಜನ್ ಅಧಿಕಾರ್ ಪಾರ್ಟಿ, ಚಂದ್ರಶೇಖರ್ ಆಝಾದ್ ರವರ ಆಝಾದ್ ಸಮಾಜ್ ಪಾರ್ಟಿ, ಆಲ್ ಇಂಡಿಯಾ ಮೈನೋರಿಟಿ ಫ್ರಂಟ್, ಭಾರತೀಯ ಲೋಕ್ ಚರಿತ ಪಾರ್ಟಿ, ಬಿಹಾರ್ ಲೋಕ್ ನಿರ್ಮಾಣ್ ದಲ್, ಜನತಾ ಕಾಂಗ್ರೆಸ್, ವಂಜಿತಾ ಬಹುಜಾ ಅಗಾಡಿ ಹಾಗೂ ಇತರ ಪಕ್ಷಗಳು ಪಪ್ಪು ಯಾದವ್ ನೇತೃತ್ವದ ಪ್ರೋಗ್ರೆಸ್ಸಿವ್ ಡೆಮಾಕ್ರೆಟಿಕ್ ಅಲಯನ್ಸ್ ರಚಿಸಿಕೊಂಡಿವೆ.

- Advertisement -

ಅಕ್ಟೋಬರ್ 28, ನವೆಂಬರ್ 3, ನವೆಂಬರ್ 7 ತಾರೀಕಿನಂದು ಬಿಹಾರಿನಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 10 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು. ಪತ್ರಿಕಾಗೋಷ್ಟಿಯಲ್ಲಿ ಎಂ.ಕೆ ಫೈಝಿ, ಪಪ್ಪು ಯಾದವ್, ಚಂದ್ರಶೇಖರ್ ಆಝಾದ್ ಮತ್ತು ಪ್ರಕಾಶ್ ಅಂಬೇಡ್ಕರ್ ಉಪಸ್ಥಿತರಿದ್ದರು.

- Advertisement -