ಬಿಜೆಪಿ ವಿಜಯೋತ್ಸವ| ಉಭಯ ಪಕ್ಷಗಳ ಕಾರ್ಯಕರ್ತರಿಂದ ಮಾರಾಮಾರಿ| ತಂದೆ-ಮಗ ಬಲಿ

Prasthutha|

ಜೈಪುರ: ಬಿಜೆಪಿ ವಿಜಯೋತ್ಸವದ ಸಂದರ್ಭ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಕಾರ್ಯಕರ್ತರಿಂದ ನಡೆದ ಮಾರಾಮಾರಿಯಲ್ಲಿ ತಂದೆ-ಮಗ ಮೃತಪಟ್ಟಿರುವ ಘಟನೆ ರಾಜಸ್ಥಾನದ ಫತೇಪುರ ಪಟ್ಟಣದ ಬಲೋಡ್ ಬಡಿ ಗ್ರಾಮದಲ್ಲಿ ನಡೆದಿದೆ.

ಪಂಚಾಯತ್ ಸಮಿತಿ ಫತೇಪುರ ವಾರ್ಡ್ ನಂ.19ರಲ್ಲಿ ಬಿಜೆಪಿ ಅಭ್ಯರ್ಥಿ ರುಬಿನಾ ಖಾನ್ ಭರ್ಜರಿ ಗೆಲುವು ಸಾಧಿಸಿದ್ದ ಹಿನ್ನೆಲೆಯಲ್ಲಿ ಮೆರವಣಿಗೆ ನಡೆಯುತ್ತಿತ್ತು. ಈ ಸಂದರ್ಭ ಮೆರವಣಿಗೆಯಲ್ಲಿದ್ದ ಯುವಕನನ್ನು ಯಾರೋ ಥಳಿಸಿದ್ದರು. ಇದರಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಘರ್ಷಣೆ ನಡೆಸಿದರು. ಅಷ್ಟರಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.

- Advertisement -

ಮಾರಾಮಾರಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕನ್ಹಯ್ಯಾಲಾಲ್(35) ಹಾಗೂ ತಂದೆ ಪ್ಯಾರೆಲಾಲ್(57) ರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಮಗ ನಡುದಾರಿಯಲ್ಲೇ ಮೃತಪಟ್ಟರೆ, ತಂದೆ ಚಿಕಿತ್ಸೆ ಫಲಾಕಾರಿಯಾಗದೆ ಮೃತಪಟ್ಟರು.

ಗಲಾಟೆಯಲ್ಲಿ ಕನಿಷ್ಟ ಹತ್ತು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  

- Advertisement -