ಬಾಬ್ರಿ ಧ್ವಂಸ: ತೀರ್ಪು ಸ್ವಾಗತಿಸಿದ ಅಡ್ವಾಣಿ

Prasthutha|

ಲಕ್ನೊ: ಬಾಬ್ರಿ ಮಸ್ಜಿದ್ ಧ್ವಂಸದ ಎಲ್ಲಾ 32 ಆರೋಪಿಗಳನ್ನು ದೋಷಮುಕ್ತಗೊಳಿಸಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ತೀರ್ಪನ್ನು ಸಂಚು ಆರೋಪಿಗಳಲ್ಲೊಬ್ಬರಾದ ಎಲ್.ಕೆ.ಅಡ್ವಾಣಿ ಸ್ವಾಗತಿಸಿದ್ದಾರೆ.

‘ರಾಮ ಜನ್ಮಭೂಮಿ ಆಂದೋಲನದ ಕುರಿತು ತನ್ನ ಮತ್ತು ಬಿಜೆಪಿಯ ನಂಬಿಕೆ ಹಾಗೂ ಬದ್ಧತೆಯನ್ನು ತೀರ್ಪು ಸಮರ್ಥಿಸುತ್ತದೆ” ಎಂದು ಅಡ್ವಾಣಿ ಹೇಳಿದ್ದಾರೆ.

- Advertisement -

ಕರಸೇವಕರು ಬಾಬ್ರಿ ಧ್ವಂಸಗೊಳಿಸಿದ 28 ವರ್ಷಗಳ ಬಳಿಕ ತೀರ್ಪು ಬಂದಿದ್ದು, ಎಲ್ಲಾ 32 ಆರೋಪಿಗಳನ್ನು ನಿರ್ದೋಷಿಗಳೆಂದು ಲಕ್ನೊದ ವಿಶೇಷ ಸಿಬಿಐ ನ್ಯಾಯಾಲಯ ಇಂದು ತೀರ್ಪಿತ್ತಿದೆ.

- Advertisement -