ಬಾಬರಿ ಧ್ವಂಸ ತೀರ್ಪಿಗೆ ಕ್ಷಣಗಣನೆ

Prasthutha|

32 ಆರೋಪಿಗಳಲ್ಲಿ 26 ಮಂದಿ ಕೋರ್ಟಿಗೆ ಹಾಜರಿ

ಎಲ್.ಕೆ.ಅಡ್ವಾಣಿ, ಎಂ.ಎಂ.ಜೋಶಿ, ಉಮಾ ಭಾರತಿ ವೀಡಿಯೊ ಕಾನ್ ಫರೆನ್ಸ್ ಮೂಲಕ ಹಾಜರಿ ಸಾಧ್ಯತೆ

- Advertisement -

ಲಕ್ನೊ: ಬಾಬರಿ ಮಸೀದಿ ಪ್ರಕರಣದಲ್ಲಿ ಲಕ್ನೋದ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ. ನ್ಯಾಯಾಲಯದ ಹೊರಗೆ ಭಾರಿ ಭದ್ರತೆ ನಿಯೋಜಿಸಲಾಗಿದೆ.

ಸಿಆರ್‌ಪಿಸಿ 313 ರ ಅಡಿಯಲ್ಲಿ ಆರೋಪಿಗಳ ಹೇಳಿಕೆ ಸೇರಿದಂತೆ ಪ್ರಕರಣದ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ತೀರ್ಪು ಪ್ರಕಟವಾಗಲಿದೆ.

ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರಲ್ಲದೆ, ಬಿಜೆಪಿಯ ಹಿರಿಯ ಮುಖಂಡರಾದ ಮುರಳಿಮನೋಹರ್ ಜೋಶಿ ಮತ್ತು  ಉಮಾ ಭಾರತಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಸೇರಿದಂತೆ 32 ಮಂದಿ ಈ ಪ್ರಕರಣದ ಆರೋಪಿಗಳಾಗಿದ್ದಾರೆ.

32 ಆರೋಪಿಗಳಲ್ಲಿ 26 ಮಂದಿ ಈಗಾಗಲೇ ನ್ಯಾಯಾಲಯದಲ್ಲಿ ಹಾಜರಾಗಿದ್ದಾರೆ. ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಉಮಾಭಾರತಿ, ಮಹಂತ್ ನೃತ್ಯ ಗೋಪಾಲ್ ದಾಸ್ ಕೋರ್ಟಿಗೆ ಹಾಜರಾಗಿಲ್ಲ. ಎಲ್.ಕೆ.ಅಡ್ವಾಣಿ, ಎಂ.ಎಂ.ಜೋಶಿ ಮತ್ತು ಉಮಾ ಭಾರತಿ ವೀಡಿಯೊ ಕಾನ್ ಫರೆನ್ಸ್ ಮೂಲಕ ಕೋರ್ಟ್ ಮುಂದೆ ಹಾಜರಾಗುವ ಸಾಧ್ಯತೆ.

- Advertisement -