ಬಹ್ರೈನ್ ನಲ್ಲಿ 11ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಇಸ್ರೇಲ್ ರಹಸ್ಯ ರಾಯಭಾರ ಕಛೇರಿ

Prasthutha|

ಅವೀವ್ : ಬಹ್ರೈನ್ ನಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಇಸ್ರೇಲ್ ನ ರಹಸ್ಯ ರಾಯಭಾರ ಕಛೇರಿ ಕಾರ್ಯ ನಿರ್ವಹಿಸುತ್ತಿದೆ ಎಂದು ವರದಿಯೊಂದು ತಿಳಿಸಿದೆ. ಅಕ್ಸಿಯೋಸ್.ಕಾಮ್ ವರದಿಗಾರ ಬರಾಕ್ ರಾವಿಡ್ ಅವರ ಸಾಪ್ತಾಹಿಕ ವರದಿಯು ಇಸ್ರೇಲಿನ ರಹಸ್ಯ ರಾಯಭಾರ ಕಛೇರಿಯ ಬಗ್ಗೆ ಬಹಿರಂಗಪಡಿಸುತ್ತದೆ. ಯುಎಇ ನಂತರ ಇಸ್ರೇಲಿನೊಂದಿಗೆ ಅಬ್ರಹಾಂ ಒಪ್ಪಂದದ ಮೂಲಕ ಬಹ್ರೈನ್ ರಾಜತಾಂತ್ರಿಕ ಸಂಬಂಧವನ್ನು ಸ್ಥಾಪಿಸುವುದು ಪ್ರಮುಖ ಹೆಜ್ಜೆಯಾಗಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಏತನ್ಮಧ್ಯೆ, ಇಸ್ರೇಲ್ 11 ವರ್ಷಗಳಿಂದ ಬಹ್ರೈನ್ ರಾಜಧಾನಿ ಮನಾಮಾದಲ್ಲಿ ರಹಸ್ಯ ರಾಯಭಾರ ಕಛೇರಿಯನ್ನು ನಡೆಸುತ್ತಿದೆ ಎಂದು ವರದಿಯಾಗಿದೆ.

- Advertisement -

ಟೈಮ್ಸ್ ಕಮರ್ಷಿಯಲ್ ಕನ್ಸಲ್ಟಿಂಗ್ ಸಂಸ್ಥೆಯಾಗಿ ಪಟ್ಟಿ ಮಾಡಲಾದ ಪ್ರಮುಖ ಕಂಪೆನಿಯ ಮೂಲಕ ಇಸ್ರೇಲ್, ಬಹ್ರೈನ್ ನಲ್ಲಿ ರಹಸ್ಯ ರಾಜತಾಂತ್ರಿಕತೆಯನ್ನು ನಡೆಸುತ್ತಿದೆ. 2009 ಜುಲೈ 13ರಂದು ಬಹ್ರೈನ್ ನಲ್ಲಿ ‘ಸೆಂಟರ್ ಫಾರ್ ಇಂಟರ್ನ್ಯಾಷನಲ್ ಡೆವಲಪ್ ಮೆಂಟ್’ ಎಂಬ ಹೆಸರಿನಲ್ಲಿ ಎಂಬ ಹೆಸರಿನಲ್ಲಿ ಒಂದು ಕಂಪೆನಿ ರಿಜಿಸ್ಟರ್ ಆಗಿತ್ತು. ಈ ಕಂಪೆನಿಯ ಸೋಗಿನಲ್ಲಿ ಇಸ್ರೇಲ್ ಬಹ್ರೈನ್ ನಲ್ಲಿ ರಾಜತಾಂತ್ರಿಕತೆಯನ್ನು ನಡೆಸುತ್ತಿದೆ.

ಕಂಪನಿಯು ಮಾರ್ಕೆಟಿಂಗ್, ಕಮರ್ಷಿಯಲ್ ಪ್ರಮೋಷನ್ ಮತ್ತು ಹೂಡಿಕೆ ಸೇವೆಗಳ ಭರವಸೆಯನ್ನು ನೀಡಿತ್ತು. 2013ರಲ್ಲಿ ಕಂಪನಿಯು ತನ್ನ ಹೆಸರನ್ನು ಬದಲಾಯಿಸಿತು. ಭದ್ರತಾ ಕಾರಣಗಳಿಗಾಗಿ ಪ್ರಸ್ತುತ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕಂಪನಿ ಹೇಳುತ್ತಿದೆ. ಉಭಯ ಪೌರತ್ವ ಹೊಂದಿರುವ ಇಸ್ರೇಲ್ ರಾಜತಾಂತ್ರಿಕರು ಕಂಪೆನಿಯ ಉದ್ಯೋಗಿಗಳಾಗಿದ್ದಾರೆ.

- Advertisement -