October 22, 2020

ಬಿಲ್ಕೀಸ್ ದಾದಿಗೆ ‘ಕಾರವಾನೆ ಮೊಹಬ್ಬತ್’ ನ ‘ಕ್ವಾಯಿದ್ ಮಿಲ್ಲತ್’ ಪ್ರಶಸ್ತಿ

ನವದೆಹಲಿ : ದೆಹಲಿಯ ಶಾಹೀನ್ ಭಾಗ್ ನಲ್ಲಿ ಸಿಎಎ/ಎನ್ ಆರ್ ಸಿ ವಿರೋಧಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಲ್ಕೀಸ್ ದಾದಿ ಅವರಿಗೆ ನಿವೃತ್ತ ಐಎಎಸ್ ಅಧಿಕಾರಿ ಹರ್ಷ ಮಂದರ್ ನೇತೃತ್ವದ ‘ಕಾರವಾನೆ ಮೊಹಬ್ಬತ್’ ಸಂಸ್ಥೆ 2020ರ ‘ದ ಕ್ವಾಯಿದ್ ಮಿಲ್ಲತ್’ ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಿದೆ. ಸಾರ್ವಜನಿಕ ಜೀವನ ಮತ್ತು ರಾಜಕೀಯದಲ್ಲಿ ಪ್ರಾಮಾಣಿಕತೆ ಮೆರೆಯುವ ಸಾಧಕರಿಗೆ ನೀಡಲಾಗುವ ಈ ಪ್ರಶಸ್ತಿಯು ಈ ವರ್ಷದ ಹಿರಿಯ ಹೋರಾಟಗಾರ್ತಿಗೆ ಪ್ರದಾನ ಮಾಡಲು ಸಂಸ್ಥೆ ನಿರ್ಧರಿಸಿದೆ

‘ಕಾರವಾನೆ ಮೊಹಬ್ಬತ್’ ಅನ್ಯಾಯ ಮತ್ತು ದೌರ್ಜನ್ಯಕ್ಕೊಳಗಾದವರಿಗೆ ಕಾನೂನು ನೆರವು ನೀಡುತ್ತದೆ. 2002ರ ಗುಜರಾತ್ ಗಲಭೆಗೆ ಪ್ರತಿಭಟನೆ ವ್ಯಕ್ತಪಡಿಸಿ ರಾಜೀನಾಮೆ ನೀಡಿರುವ ಮಾಜಿ ಐಎಎಸ್ ಅಧಿಕಾರಿ ಹರ್ಷ ಮಂದರ್ ‘ಕಾರವಾನೆ ಮೊಹಬ್ಬತ್’ನ ಪ್ರೇರಕ ಶಕ್ತಿಯಾಗಿದ್ದಾರೆ. ಪ್ರಮುಖ ಸಾಮಾಜಿಕ ಕಾರ್ಯಕರ್ತರು, ಮಾಜಿ ಸರಕಾರಿ ಅಧಿಕಾರಿಗಳು, ನ್ಯಾಯಾಧೀಶರು, ನ್ಯಾಯವಾದಿಗಳು, ಶಿಕ್ಷಣ ತಜ್ಞರು, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ, ಉನ್ನತ ಅಧಿಕಾರಿಗಳು, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದ ಹಲವಾರು ಮಂದಿಗೆ ಈ ಸಂಸ್ಥೆ ನೆರವಾಗಿದೆ.

ದೇಶಾದ್ಯಂತ ನಡೆದ ಸಿಎಎ/ಎನ್ ಆರ್ ಸಿ ಪ್ರತಿಭಟನೆ ವೇಳೆ ದೆಹಲಿಯಲ್ಲಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದ 82ರ ಹರೆಯದ ಬಿಲ್ಕೀಸ್ ದಾದಿ, ಬಡತನದ ಹಿನ್ನೆಲೆಯಿಂದ ಬಂದವರು. ಪ್ರತಿಷ್ಠಿತ ‘ದ ಟೈಮ್ಸ್’ ಮ್ಯಾಗಜಿನ್ ನ ಈ ವರ್ಷದ 100 ಜಾಗತಿಕ ಪ್ರಭಾವಿಗಳ ಪಟ್ಟಿಯಲ್ಲಿ ಬಲ್ಕೀಸ್ ದಾದಿ ಅವರಿಗೂ ಸ್ಥಾನ ಸಿಕ್ಕಿದೆ.

ಟಾಪ್ ಸುದ್ದಿಗಳು

ವಿಶೇಷ ವರದಿ