ಬಂಟ್ವಾಳ: ವಿಮೆನ್ ಇಂಡಿಯಾ ಮೂಮೆಂಟ್ ವತಿಯಿಂದ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯದ ವಿರುದ್ಧ ಪ್ರತಿಭಟನೆ

Prasthutha|

ಬಂಟ್ವಾಳ: ದೇಶಾದ್ಯಂತ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ವಿಮೆನ್ ಇಂಡಿಯಾ ಮೂಮೆಂಟ್ ದ.ಕ.ಜಿಲ್ಲಾ ಸಮಿತಿ ವತಿಯಿಂದ  ಬಂಟ್ವಾಳ ಮಿನಿ ವಿಧಾನ ಸೌದ ಬಳಿ ಇಂದು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯ ನೇತೃತ್ವವನ್ನು ಸಂಘಟನೆಯ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಹನಾ ಬಂಟ್ವಾಳ ವಹಿಸಿದ್ದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ರಾಜ್ಯಧ್ಯಕ್ಷೆ ಶಾಹಿದಾ ತಸ್ನೀಮ್, “ದೇಶದಲ್ಲಿ ಮಹಿಳೆಯರಿಗೆ ಬದುಕಲು ಸಾಧ್ಯವಾಗದ ಪರಿಸ್ಥಿತಿ ಇದೆ. ದಿನ ಕಳೆದಂತೆ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು.

- Advertisement -

ನ್ಯಾಷನಲ್ ವುಮೆನ್ ಫ್ರಂಟ್ ಸದಸ್ಯೆ ಶಹಿಲಾ ತುಂಬೆ, ಕ್ಯಾಂಪಸ್ ಫ್ರಂಟ್  ಬಂಟ್ವಾಳ  ಘಟಕ ಕಾರ್ಯದರ್ಶಿ ಸಪ್ರಿನಾ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು. ವುಮೆನ್ ಇಂಡಿಯಾ ಮೂಮೆಂಟ್ ದ.ಕ ಜಿಲ್ಲಾ ಸಮಿತಿ ಸದಸ್ಯೆ ಝುಲೈಕಾ ಕಾರ್ಯಕ್ರಮ ನಿರೂಪಿಸಿದರು.

- Advertisement -